ETV Bharat / bharat

ರಾಜಕೀಯದಿಂದ ಹಿಂದೆ ಸರಿದ ರಜನಿಕಾಂತ್​: ಅಘಾತಕ್ಕೊಳಗಾಗಿ ಸಾವಿಗೀಡಾದ ಅಭಿಮಾನಿ - ಚೆನ್ನೈ

ಸೂಪರ್‌ಸ್ಟಾರ್ ರಜನಿಕಾಂತ್, ರಾಜಕೀಯಕ್ಕೆ ಪ್ರವೇಶಿಸದೆ ಜನರ ಸೇವೆಯನ್ನು ಮುಂದುವರಿಸುವುದಾಗಿ ಘೋಷಿಸಿದ್ದರು. ಈ ಘೋಷಣೆಯಿಂದ ಆಘಾತಕ್ಕೊಳಗಾದ ಅಭಿಮಾನಿಯೊಬ್ಬರು ವಿಲ್ಲುಪುರಂನ ಪನಂಪಟ್ಟುದಲ್ಲಿರುವ ತಮ್ಮ ಮನೆಯಲ್ಲಿ ಸಾವಿಗೀಡಾಗಿದ್ದಾರೆ.

Upset over Rajinikanth's political announcement, fan dies
ರಜನಿಕಾಂತ್
author img

By

Published : Dec 31, 2020, 7:05 PM IST

ಚೆನ್ನೈ: ರಜನಿಕಾಂತ್ ಅವರು ರಾಜಕೀಯಕ್ಕೆ ಪದಾರ್ಪಣೆ ಮಾಡುವುದಿಲ್ಲ ಎಂಬ ಘೋಷಣೆಯಿಂದ ಅಸಮಾಧಾನಗೊಂಡ ಅಭಿಮಾನಿ ಅಘಾತಕ್ಕೊಳಗಾಗಿ ಸಾವಿಗೀಡಾಗಿದ್ದಾನೆ.

ಸೂಪರ್‌ಸ್ಟಾರ್ ರಜನಿಕಾಂತ್ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಮಾತನಾಡಿದ್ದರು. ಹಾಗೆಯೇ ರಾಜಕೀಯಕ್ಕೆ ಪ್ರವೇಶಿಸದೇ ಜನರ ಸೇವೆಯನ್ನು ಮುಂದುವರಿಸುವುದಾಗಿ ಘೋಷಿಸಿದ್ದರು. ಈ ಘೋಷಣೆಯಿಂದ ಆಘಾತಕ್ಕೊಳಗಾದ ಅಭಿಮಾನಿಯೊಬ್ಬರು ವಿಲ್ಲುಪುರಂನ ಪನಂಪಟ್ಟುದಲ್ಲಿರುವ ತಮ್ಮ ಮನೆಯಲ್ಲಿ ಸಾವಿಗೀಡಾಗಿದ್ದಾರೆ.

ಪಣಂಪಟ್ಟು ನಿವಾಸಿ ರಾಜ್‌ಕುಮಾರ್ ಸಾವಿಗೀಡಾದವ. ಈತ ಕಳೆದ ಕೆಲವು ದಿನಗಳಿಂದ ರಜನಿಕಾಂತ್ ಅವರ ರಾಜಕೀಯದ ಬಗೆಗಿನ ಘೋಷಣೆಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದನಂತೆ.

ಈ ಎಲ್ಲ ಘಟನೆಗೂ ಮೊದಲು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಮ್ಮ ಜೀವನದ ಕೊನೆಯ ದಿನ ಇದು ಎಂದು ಕೂಡ ಹೇಳಿಕೊಂಡಿದ್ದನಂತೆ. ಸ್ನೇಹಿತರೊಂದಿಗೆ ಮದ್ಯ ಸೇವಿಸಿದ ನಂತರ ಮಲಗಲು ಹೋದವ ಮತ್ತೇ ಮೇಲೇಳಲೇ ಇಲ್ಲ.

ಈ ಸಾವಿನ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದಂತಾಗಿದೆ. ಅಂತಿಮ ದರ್ಶನಕ್ಕಾಗಿ ಇರಿಸಲಾಗಿದ್ದ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಯುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.