ನವದೆಹಲಿ: ಚೀನಾ-ಭಾರತ ನಡುವಿನ ಗಡಿ ಉದ್ವಿಗ್ನತೆಯ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರು ಲಡಾಖ್ ಗಡಿಗೆ ಭೇಟಿ ನೀಡಿದ್ದು, ಎದುರಾಳಿ ಚೀನಾಗೆ ದಿಟ್ಟ ಸಂದೇಶ ರವಾನಿಸಿದ್ದಾರೆ. ಭಾರತ ಯಾವುದಕ್ಕೂ ಭಯಪಡುವುದಿಲ್ಲ. ಗಡಿ ವಿಚಾರದಲ್ಲಿ ಯಾವ ಕಾರಣಕ್ಕೂ ರಾಜೀ ಆಗಲ್ಲ ಎಂಬುದನ್ನು ಸಾರಿ ಹೇಳಿದ್ದಾರೆ.
ಭೂಸೇನಾ ವಿಭಾಗದ ಪ್ರಧಾನ ಕಚೇರಿಯಾದ ನಿಮುಗೆ ಪ್ರಧಾನಿ ಅವರ ಅಚ್ಚರಿಯಾಗಿ ಭೇಟಿ ನೀಡಿದ್ದರು. ಅಲ್ಲಿ ಅವರು ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರೊಂದಿಗೆ ಇದ್ದರು. ಲೇಹ್‌ನಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ನಿಮುನಲ್ಲಿ ಸೈನ್ಯ, ಐಎಎಫ್ ಮತ್ತು ಐಟಿಬಿಪಿ ಸಿಬ್ಬಂದಿಗಳೊಂದಿಗೆ ಸಂವಹನ ನಡೆಸಿದರು. ಜೂನ್ 15ರಂದು ಗಲ್ವಾನ್ ಕಣಿವೆಯಲ್ಲಿ ನಡೆದ ಘಟನೆಯಿಂದ ಗಾಯಗೊಂಡಿದ್ದ ಸೈನಿಕರಿರುವ ಲೆಹ್ ಬೇಸ್ ಆಸ್ಪತ್ರೆಗೆ ಭೇಟಿ ನೀಡಿದರು.
ಭಾರತೀಯ ಸೈನ್ಯ ಮತ್ತು ಪಿಎಲ್‌ಎ ನಡುವೆ ಮೂರು ಸುತ್ತಿನ ಅಭೂತಪೂರ್ವ ಕಾರ್ಪ್ಸ್ ಕಮಾಂಡರ್ ಮಟ್ಟದ ಮಿಲಿಟರಿ ಮಾತುಕತೆ ಜೂನ್ 6ರಿಂದ ಮೂರು ಬಾರಿ ನಡೆದಿದ್ದು, ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಬೆಳೆಯುತ್ತಿರುವ ಉದ್ವಿಗ್ನತೆ ಉಲ್ಬಣಿಸುತ್ತಲೇ ಇದೆ. ಪ್ರಧಾನಿ ಮೋದಿ ಲಡಾಖ್ ಭೇಟಿ ಯೋಧರಲ್ಲಿ ಧೈರ್ಯ ತುಂಬಿದೆ. ನರೇಂದ್ರ ಮೋದಿ ಅವರ ಭಾಷಣ ಚೀನಾಗೆ ಖಡಕ್ ಸಂದೇಶ ರವಾನಿಸಿದಂತಾಗಿದೆ.