ಮುಜಾಫ್ಫರ್ ನಗರ: ಅವರಿಬ್ಬರು ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲ, ಒಂದೇ ಗ್ರಾಮದ ನಿವಾಸಿಗಳೂ ಆಗಿದ್ದರು. ಇಬ್ಬರ ಮಧ್ಯೆಯಿದ್ದ ಸ್ನೇಹ ಕಾಲಾ ನಂತರದಲ್ಲಿ ಪ್ರೀತಿಗೆ ತಿರುಗಿದೆ. ಆದ್ರೆ ತನ್ನ ಆಸೆ ಈಡೇರಿದ ಬಳಿಕ ಪ್ರಿಯಕರ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾನೆ.
ಈ ಘಟನೆ ಉತ್ತರಪ್ರದೇಶದ ಮುಜಾಫ್ಫರ್ನಗರದಲ್ಲಿ ನಡೆದಿದೆ. ಜಿಲ್ಲೆಯ ಒಂದೇ ಗ್ರಾಮದವರಾದ ಈ ಜೋಡಿ ಉತ್ತರಾಖಂಡದ ಡೆಹ್ರಾಡೂನ್ನಲ್ಲಿರುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು ಮಧ್ಯೆ ಪ್ರೇಮಾಂಕುರವು ಆಗಿತ್ತು. ಯುವತಿಗೆ ಮದುವೆಯಾಗುವುದಾಗಿ ನಂಬಿಸಿದ ಯುವಕ ಆಶುತೋಷ್ ಭರವಸೆ ನೀಡಿ ನಿರಂತರ ಅತ್ಯಾಚಾರ ಎಸಗಿದ್ದಾನೆ. ಯುವತಿ ಮದುವೆಯಾಗುವಂತೆ ಒತ್ತಡ ಹೇರಿದ್ದಾಗ ಆಶುತೋಷ್ ಪರಾರಿಯಾಗಿದ್ದಾನೆ.
ಆಶುತೋಷ್ನಿಂದ ಮೋಸ ಹೋದ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆಶುತೋಷ್ ವಿರುದ್ಧ ದೂರು ನೀಡಿದ್ದು, ಪೊಲೀಸರು ಪರಾರಿಯಾಗಿರುವ ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ.