ETV Bharat / bharat

ಕೋವಿಡ್​-19 ಆಸ್ಪತ್ರೆಗಳಲ್ಲಿ ಮೊಬೈಲ್​​ ನಿಷೇಧ: 24 ಗಂಟೆಯೊಳಗೆ ಆದೇಶ ಹಿಂಪಡೆದ ಯೋಗಿ ಸರ್ಕಾರ

ಕೋವಿಡ್​-19 ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಮೊಬೈಲ್ ಬಳಕೆ ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಹಿಂಪಡೆದಿದ್ದಾರೆ.

UP govt
ಯೋಗಿ ಆದಿಥ್ಯನಾಥ್​
author img

By

Published : May 24, 2020, 7:25 PM IST

ಲಖನೌ(ಉತ್ತರ ಪ್ರದೇಶ): ಕೋವಿಡ್​-19 ಆಸ್ಪತ್ರೆಗಳಲ್ಲಿ ಮೊಬೈಲ್​ಗಳನ್ನು​ ಬ್ಯಾನ್​​ ಮಾಡಿ ಶನಿವಾರ ರಾತ್ರಿ ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ 24 ಗಂಟೆಯೊಳಗಾಗಿ ಆದೇಶವನ್ನು ಹಿಂಪಡೆದಿದೆ.

ಕೊರೊನಾ ಚಿಕಿತ್ಸೆಗಾಗಿ ಮೀಸಲಿರುವ L-2 ಹಾಗೂ L-3 ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳು ಐಸೋಲೇಷನ್​ ವಾರ್ಡ್​ಗಳಲ್ಲಿ ಮೊಬೈಲ್​ ಫೋನ್​ ಬಳಸುವಂತಿಲ್ಲ. ವಾರ್ಡ್​ಗಳ ಉಸ್ತುವಾರಿ ಬಳಿ ಮಾತ್ರ ಎರಡು ಫೋನ್​ಗಳಿರುತ್ತವೆ. ಇದನ್ನು ಬಳಸಿ ರೋಗಿಗಳು ತಮ್ಮ ಕುಟುಂಬಸ್ಥರೊಂದಿಗೆ ಮಾತನಾಡಬಹುದು ಎಂದು ಆಸ್ಪತ್ರೆಗಳ ಅಧಿಕಾರಿಗಳು ಹಾಗೂ ನಿರ್ದೇಶಕರಿಗೆ ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ಮಹಾನಿರ್ದೇಶಕ ಕೆ.ಕೆ. ಗುಪ್ತಾ ಸೂಚಿಸಿದ್ದರು.

ಇದೀಗ ಈ ಆದೇಶವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಹಿಂಪಡೆದಿದ್ದು, ರೋಗಿಗಳು ವಾರ್ಡ್​ಗಳಲ್ಲಿ ಮೊಬೈಲ್​ ಬಳಸಲು ಯಾವುದೇ ನಿರ್ಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.