ETV Bharat / bharat

'ಉತ್ತರ ಪ್ರದೇಶ ಸಾಂಕ್ರಾಮಿಕ ರೋಗ ನಿಯಂತ್ರಣ ಸುಗ್ರೀವಾಜ್ಞೆ 2020' ಜಾರಿಗೆ ಸರ್ಕಾರ ಸಜ್ಜು - ಉತ್ತರ ಪ್ರದೇಶ ರಾಜ್ಯ ಸರ್ಕಾರ

'ಉತ್ತರ ಪ್ರದೇಶ ಸಾಂಕ್ರಾಮಿಕ ರೋಗ ನಿಯಂತ್ರಣ 2020' ಎಂಬ ಸುಗ್ರೀವಾಜ್ಞೆಯನ್ನು ತರಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ.

UP govt planning ordinance to punish those who misbehave with frontline COVID-19 workers
'ಉತ್ತರ ಪ್ರದೇಶ ಸಾಂಕ್ರಾಮಿಕ ರೋಗ ನಿಯಂತ್ರಣ ಸುಗ್ರೀವಾಜ್ಞೆ 2020' ಜಾರಿಗೆ ಸರ್ಕಾರ ಸಜ್ಜು
author img

By

Published : Apr 29, 2020, 3:28 PM IST

ಲಕ್ನೋ(ಉತ್ತರ ಪ್ರದೇಶ): ಲಾಕ್ ಡೌನ್ ಉಲ್ಲಂಘನೆ ಹಾಗೂ ಕೊರೊನಾ ವಾರಿಯರ್ಸ್​ ವಿರುದ್ಧ ಕೆಟ್ಟದಾಗಿ ವರ್ತಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಉತ್ತರ ಪ್ರದೇಶ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

'ಉತ್ತರ ಪ್ರದೇಶ ಸಾಂಕ್ರಾಮಿಕ ರೋಗ ನಿಯಂತ್ರಣ 2020' ಎಂಬ ಸುಗ್ರೀವಾಜ್ಞೆಯನ್ನು ತರಲು ರಾಜ್ಯ ಸರ್ಕಾರ ಮುಂದಾಗಿದೆ.

ಶಿಕ್ಷೆಗೆ ಗುರಿಯಾಗುವವರು?:

ಲಾಕ್‌ಡೌನ್ ಆದೇಶಗಳನ್ನು ಉಲ್ಲಂಘಿಸಿ ಸಿಕ್ಕಿಬಿದ್ದವರಿಗೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪು ಗುಂಪಾಗಿ ಸೇರುವವರಿಗೆ, ವೈದ್ಯಕೀಯ ಮತ್ತು ನೈರ್ಮಲ್ಯ ಕಾರ್ಮಿಕರಂತಹ ಮುಂಚೂಣಿಯ ಕೋವಿಡ್​-19 ಕಾರ್ಮಿಕರ ಮೇಲೆ ಹಲ್ಲೆ ನಡೆಸುವವರಿಗೆ, ನಿಯಮ ಪಾಲನೆ, ಶಿಸ್ತು ಪಾಲನೆಯ ಮೇಲೆ ನಿಗಾ ವಹಿಸುವ ಪೊಲೀಸ್ ಸಿಬ್ಬಂದಿ ವಿರುದ್ಧ ನಡೆದುಕೊಳ್ಳುವವರಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಅಥವಾ ಅಸಭ್ಯವಾಗಿ ವರ್ತಿಸುವವರಿಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ. ವರೆಗೆ ದಂಡ ವಿಧಿಸುವ ನಿಬಂಧನೆಗಳನ್ನು ಸರ್ಕಾರ ಯೋಜಿಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.