ETV Bharat / bharat

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಚಿತ್ರೀಕರಣ, ಬಲವಂತದ ಮತಾಂತರಕ್ಕೆ ಒತ್ತಾಯ ಆರೋಪ: ಇಬ್ಬರ ಬಂಧನ - ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ದೃಶ್ಯ ಚಿತ್ರೀಕರಣ

ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿ ಅಶ್ಲೀಲ ದೃಶ್ಯ ಚಿತ್ರೀಕರಿಸಿ, ಮತಾಂತರಕ್ಕೆ ಒತ್ತಾಯ ಮಾಡಿದ ಆರೋಪದಲ್ಲಿ ಇಬ್ಬರನ್ನು ಉತ್ತರ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ.

22-year-old man, his father arrested on charges of rape of minor, unlawful religious conversion
ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ದೃಶ್ಯ ಚಿತ್ರೀಕರಣ, ಬಲವಂತದ ಮತಾಂತರ ಆರೋಪ: ಇಬ್ಬರ ಬಂಧನ
author img

By

Published : Jan 26, 2021, 10:42 PM IST

ಬಲ್ಲಿಯಾ, (ಉತ್ತರ ಪ್ರದೇಶ): 14 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಅಶ್ಲೀಲ ದೃಶ್ಯಗಳನ್ನು ಚಿತ್ರೀಕರಿಸಿ, ಬಲವಂತದ ಮತಾಂತರ ಮಾಡಿಕೊಳ್ಳಲು ಮದುವೆಗೆ ಒತ್ತಾಯಿಸುತ್ತಿದ್ದ ಆರೋಪದ ಮೇಲೆ 22 ವರ್ಷದ ಯುವಕ ಮತ್ತು ಆತನ ತಂದೆಯನ್ನು ಬಂಧಿಸಲಾಗಿದೆ.

ಉತ್ತರ ಪ್ರದೇಶ ಬಲ್ಲಿಯಾ ಎಂಬಲ್ಲಿ ಘಟನೆ ನಡೆದಿದ್ದು, ಮತಾಂತರ ನಿಷೇಧ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 11ರಂದು ಓರ್ವ ಯುವಕ 14 ವರ್ಷದ ಬಾಲಕಿಯ ಮನೆಗೆ ನುಗ್ಗಿ, ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಅತ್ಯಾಚಾರದ ದೃಶ್ಯವನ್ನು ಸೆರೆ ಹಿಡಿದು ಮದುವೆಯಾಗಿ ಮತಾಂತರವಾಗಲು ಒತ್ತಾಯಿಸುತ್ತಿದ್ದನಂತೆ. ಜನವರಿ 13ರಂದು ಬಾಲಕಿ ಈ ವಿಚಾರವನ್ನು ತನ್ನ ಪೋಷಕರಿಗೆ ತಿಳಿಸಿದ್ದಾಳೆ.

ಇದನ್ನೂ ಓದಿ: ಪ್ರತಿಭಟನಾಕಾರರು ಭಯೋತ್ಪಾದಕರು, ಅವರಿಗೆ ಬೆಂಬಲಿಸಿದ ಎಲ್ಲರನ್ನೂ ಬಂಧಿಸಿ : ಕಂಗನಾ

ಆರೋಪಿ ಪ್ರಭಾವಿ ವ್ಯಕ್ತಿಯಾದ ಕಾರಣದಿಂದ ಬಾಲಕಿಯ ಪೋಷಕರು ದೂರು ದಾಖಲಿಸಲು ಹಿಂಜರಿದಿದ್ದು, ಸೋಮವಾರ (ಜನವರಿ 25) ಬಾಲಕಿಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಇದರ ಜೊತೆಗೆ ಆರೋಪಿಯ ತಂದೆಯಿಂದಲೂ ಬೆದರಿಕೆಯಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ತಾಡ ತಿಳಿಸಿದ್ದಾರೆ.

ದೂರು ದಾಖಲಾದ ಬೆನ್ನಲ್ಲೇ ಪರಾರಿಯಾಗಲು ಯತ್ನಿಸಿದ ಯುವಕ ಮತ್ತು ಆತನ ತಂದೆಯನ್ನು ಹತ್ತಿರದ ರೈಲ್ವೆ ನಿಲ್ದಾಣದ ಬಳಿ ಪೊಲೀಸರು ಬಂಧಿಸಿದ್ದು, ಇಬ್ಬರನ್ನೂ ಕೋರ್ಟ್​ ಮುಂದೆ ಹಾಜರುಪಡಿಸಿ, ಜೈಲಿಗೆ ಕಳುಹಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.