ನವದೆಹಲಿ: ಇಂದು ರಾಜ್ಯಸಭೆಯಲ್ಲಿ ಸರ್ಕಾರ ತ್ರಿವಳಿ ತಲಾಖ್ ವಿಧೇಯಕ ಮಂಡನೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸತ್ ಆರಂಭಕ್ಕೂ ಮುನ್ನ ಬಿಜೆಪಿ ಸಂಸದೀಯ ಪಕ್ಷದ ಸಭೆ ನಡೆಸುತ್ತಿದೆ.
ಸಭೆಗೆ ಗೃಹ ಸಚಿವ ಅಮಿತ್ ಶಾ, ಅರ್ಜುನ್ ರಾಮ್ ಮೇಗ್ವಾಲ್, ಪ್ರಹ್ಲಾದ್ ಜೋಶಿ ಸೇರಿದಂತೆ ಪ್ರಮುಖರು ಸಂಸದೀಯ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇಂದು ರಾಜ್ಯಸಭೆಯಲ್ಲಿ ಮಂಡನೆ ಆಗಲಿರುವ ತ್ರಿವಳಿ ತಲಾಖ್ ಬಿಲ್ ಪಾಸ್ ಮಾಡಿಸುವಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು ಎನ್ನಲಾಗಿದೆ.
ರಾಜ್ಯಸಭೆ ಅಂಗೀಕಾರಕ್ಕೆ ತ್ರಿವಳಿ ತಲಾಖ್ ಮಸೂದೆ.. ಪ್ರತಿಪಕ್ಷಗಳಿಂದ ಗದ್ದಲ ಸಾಧ್ಯತೆ
ಇನ್ನು ತೃಣಮೂಲ ಕಾಂಗ್ರೆಸ್ ತನ್ನ ಎಲ್ಲ ಸದಸ್ಯರಿಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿದ್ದು, ವಿಪ್ ಜಾರಿ ಮಾಡಿದೆ. ರಾಜ್ಯಸಭೆಯಲ್ಲಿ ಇಂದು ಹಾಗೂ ಮುಂದಿನ ಎರಡು ದಿನ ಹಾಜರಿರಲೇಬೇಕು ಎಂದು ವಿಪ್ನಲ್ಲಿ ಸೂಚಿಸಲಾಗಿದೆ.
-
Delhi: Union Home Minister Amit Shah and Union ministers Arjun Ram Meghwal and Prahlad Joshi arrive for BJP Parliamentary Party meeting at Parliament premises. pic.twitter.com/QFQEafngyq
— ANI (@ANI) July 30, 2019 " class="align-text-top noRightClick twitterSection" data="
">Delhi: Union Home Minister Amit Shah and Union ministers Arjun Ram Meghwal and Prahlad Joshi arrive for BJP Parliamentary Party meeting at Parliament premises. pic.twitter.com/QFQEafngyq
— ANI (@ANI) July 30, 2019Delhi: Union Home Minister Amit Shah and Union ministers Arjun Ram Meghwal and Prahlad Joshi arrive for BJP Parliamentary Party meeting at Parliament premises. pic.twitter.com/QFQEafngyq
— ANI (@ANI) July 30, 2019
ಅಷ್ಟೇ ಅಲ್ಲ, ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಸಹ ವಿಪ್ ಜಾರಿ ಮಾಡಿದೆ. ಕಾಂಗ್ರೆಸ್ ಸಹ ಮಹತ್ವದ ಸಭೆ ನಡೆಸಿ ಇಂದು ರಾಜ್ಯಸಭೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದೆ.