ETV Bharat / bharat

ದೇಶದ ಗ್ರಾಮೀಣ ಭಾಗಗಳಲ್ಲಿ ನಿರುದ್ಯೋಗ ಪ್ರಮಾಣ ಏರಿಕೆ: ವರದಿ ನೀಡುವ ಕಾರಣಗಳಿಲ್ಲಿವೆ.. - Unemployment rate

ದೇಶದ ಗ್ರಾಮಾಂತರ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಭಾರತೀಯ ಆರ್ಥಿಕತೆ ಮೇಲ್ವಿಚಾರಣಾ ಕೇಂದ್ರ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ತಿಳಿಸಿವೆ.

employment in rural area
ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ
author img

By

Published : Jul 29, 2020, 7:09 PM IST

ಹೈದರಾಬಾದ್: ದೇಶಾದ್ಯಂತ ಲಾಕ್​​ಡೌನ್​ ತೆರವಾಗುತ್ತಿರುವ ಈ ವೇಳೆ ಸರಾಸರಿ ನಿರುದ್ಯೋಗದ ಪ್ರಮಾಣ ಶೇಕಡಾ 7.94ರಿಂದ ಶೇ 8.21ಕ್ಕೆ ಏರಿಕೆಯಾಗಿದೆ ಎಂದು ವರದಿಯೊಂದು ಹೇಳುತ್ತಿದೆ.

ಭಾರತೀಯ ಆರ್ಥಿಕತೆ ಮೇಲ್ವಿಚಾರಣಾ ಕೇಂದ್ರ ಬಿಡುಗಡೆ ಮಾಡಿರುವ ಅಂಕಿ ಅಂಶಗಳಂತೆ, ಗ್ರಾಮೀಣ ಪ್ರದೇಶಗಳ ನಿರುದ್ಯೋಗಕ್ಕಿಂತ ನಗರ ಪ್ರದೇಶದ ನಿರುದ್ಯೋಗದ ಮಟ್ಟ ಹೆಚ್ಚಿದೆ. ಆದರೆ ನಿರುದ್ಯೋಗ ಪ್ರಮಾಣ ಗ್ರಾಮಾಂತರ ಪ್ರದೇಶಗಳಲ್ಲೇ ಹೆಚ್ಚಾಗುತ್ತಿದೆ.

ಗ್ರಾಮಾಂತರ ಪ್ರದೇಶಗಳಲ್ಲಿ ಹಿಂದಿನ ವಾರ ಶೇ 7.1ರಷ್ಟು ನಿರುದ್ಯೋಗದ ಪ್ರಮಾಣವಿದ್ದು, ಈ ವಾರ ಅದು ಶೇ 7.66ಕ್ಕೆ ಏರಿಕೆ ಕಂಡಿದೆ. ಅಂದ್ರೆ ಶೇ 0.56ರಷ್ಟು ಹೆಚ್ಚಳವಾಗಿದೆ.

ಭಾರತದಲ್ಲಿ ಉದ್ಯೋಗದ ಪ್ರಮಾಣ ಇಳಿಕೆಯಾಗುತ್ತಿದ್ದು, ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ. 2020ರ ಮೊದಲ ತ್ರೈಮಾಸಿಕದಲ್ಲಿ ಸರಾಸರಿ ಉದ್ಯೋಗ ಪ್ರಮಾಣ ಶೇ 39.2ರಷ್ಟಿದ್ದು, ಏಪ್ರಿಲ್​ನಲ್ಲಿ 27.2ಕ್ಕೆ ಇಳಿಕೆಯಾಗಿತ್ತು. ಅದೃಷ್ಟವಶಾತ್​ ಮೇ ಶೇ 29.2ಕ್ಕೆ ಏರಿಕೆ ಕಂಡಿದ್ದು, ಜೂನ್​ ತಿಂಗಳಲ್ಲಿ ಶೇ 35.9ಕ್ಕೆ ಏರಿಕೆಯಾಗಿದೆ ಉದ್ಯೋಗ ವಲಯ ಚೇತರಿಕೆ ಕಂಡಿದೆ.

ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಹೆಚ್ಚಳಕ್ಕೆ ಕಾರಣಗಳು:

  • ಅನ್​ಲಾಕ್​ ಆರಂಭವಾದ ದಿನಗಳಲ್ಲಿ ಕೆಲವೊಂದು ಕಾರ್ಖಾನೆಗಳು ತೆರೆದವು. ಆದರೆ ನಗರ ಪ್ರದೇಶದಲ್ಲಿ ವಾಸವಾಗಿ, ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮೀಣ ಭಾಗಗಳ ಜನರು ಲಾಕ್​ ಡೌನ್​ ಕಾರಣಕ್ಕೆ ತಮ್ಮೂರುಗಳಿಗೆ ವಾಪಸ್ಸಾಗಿದ್ದರು.
  • ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಮಹಾತ್ಮ ಗಾಂಧಿ ನರೇಗಾ ಯೋಜನೆ ಸಾಕಷ್ಟು ವ್ಯಾಪಿಸಿಲ್ಲ. ಕೆಲವು ಸ್ಥಳಗಳಲ್ಲಿ ಕೆಲಸ ನೀಡಿದರೂ ತಿಂಗಳಿಗೆ 10 ದಿನ ಮಾತ್ರ ಕೆಲಸ ಮಾಡಲು ಮಾತ್ರ ಅವಕಾಶವಿದೆ.
  • ಕೆಲವು ರಾಜ್ಯಗಳಲ್ಲಿ ಮಾನ್ಸೂನ್​ ಅಬ್ಬರಿಸುತ್ತಿದ್ದು, ಪ್ರವಾಹದಂತಹ ವಿಕೋಪಗಳಿಗೆ ಜನರು ತುತ್ತಾಗಿದ್ದಾರೆ. ಇದರಿಂದ ಕೃಷಿ ಹಾಗೂ ಸ್ವಯಂ ಉದ್ಯೋಗಗಳೂ ನಾಶವಾಗಿವೆ.
  • ಖಾರಿಫ್​ ಬೆಳೆಗಳ ಅವಧಿ ಮುಗಿದಿದ್ದು, ಮಳೆಯನ್ನು ಅವಲಂಬಿಸಿದ ಕೃಷಿ ಕಾರ್ಯಗಳು ಮಾತ್ರ ಬಹುತೇಕ ಕಡೆಗಳಲ್ಲಿ ನಡೆಯುತ್ತಿದ್ದು, ಕೃಷಿ ಕಾರ್ಮಿಕರಿಗೂ ಬೇಡಿಕೆ ಕಡಿಮೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.