ಹೈದರಾಬಾದ್: ತೆಲಂಗಾಣ ಪುರಸಭೆ ಚುನಾವಣೆಯಲ್ಲಿ ಟಿಆರ್ಎಸ್ ವಿಜಯಕ್ಕೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರೇ ಪ್ರಮುಖ ಕಾರಣ ಎಂದು ರಾಜ್ಯ ಪುರಸಭೆ ಸಚಿವ ಕೆ.ಟಿ.ರಾಮ ರಾವ್ ಹೇಳಿದ್ದಾರೆ.
ಈ ಚುನಾವಣೆ ಫಲಿತಾಂಶ ನಮ್ಮ ಜವಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಪಕ್ಷದ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರು ಮತ್ತು ನಮ್ಮ ಪಕ್ಷಕ್ಕೆ ಮತ ಚಲಾಯಿಸಿದ ಮತದಾರರಿಗೆ ಕೆ.ಟಿ.ರಾಮರಾವ್ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಕೆಸಿಆರ್ ಸರ್ಕಾರ ಜಾರಿಗೆ ತಂದ ನೂತನ ಮುನ್ಸಿಪಲ್ ಕಾಯ್ದೆ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದಿದ್ದಾರೆ.