ಇತಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಇತಾದಲ್ಲಿ ಶುಕ್ರವಾರ ಸಂಜೆ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆ ಕಾಮಗಾರಿ ವೇಳೆ ದುರ್ಘಟನೆ ಸಂಭವಿಸಿದ್ದು, ದುರ್ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಓವರ್ ಬ್ರಿಡ್ಜ್‌ನ ಸ್ಲ್ಯಾಬ್ ಎತ್ತುವಾಗ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಅವಶೇಷಗಳ ಕೆಳಗೆ ಒಂದು ಜೆಸಿಬಿ ಮತ್ತು ವಾಹನಗಳು ಸೇರಿದಂತೆ ಹಲವರು ಸಿಲುಕಿರುವುದಾಗಿ ಪ್ರತ್ಯಕ್ಷದರ್ಶಿ ಡಾ.ದೇವ್ ಆನಂದ್ ಎಂಬವರು ಈಟಿವಿ ಭಾರತ ಜೊತೆ ಮಾತನಾಡುತ್ತಾ ಶಂಕೆ ವ್ಯಕ್ತಪಡಿಸಿದ್ದಾರೆ.
-
Etah: Two persons died after an under-construction bridge collapsed in Malawan area. District Magistrate Sukhlal Bharti says, "FIR will be registered against defaulters and strict action will be taken against them". (19.06.2020) pic.twitter.com/V9D2qsy2Mf
— ANI UP (@ANINewsUP) June 19, 2020 " class="align-text-top noRightClick twitterSection" data="
">Etah: Two persons died after an under-construction bridge collapsed in Malawan area. District Magistrate Sukhlal Bharti says, "FIR will be registered against defaulters and strict action will be taken against them". (19.06.2020) pic.twitter.com/V9D2qsy2Mf
— ANI UP (@ANINewsUP) June 19, 2020Etah: Two persons died after an under-construction bridge collapsed in Malawan area. District Magistrate Sukhlal Bharti says, "FIR will be registered against defaulters and strict action will be taken against them". (19.06.2020) pic.twitter.com/V9D2qsy2Mf
— ANI UP (@ANINewsUP) June 19, 2020
ಸುದ್ದಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದರು. ದುರ್ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.