ETV Bharat / bharat

ಕೊರೊನಾ ಮಹಾಮಾರಿ ''ಅಡ್ಡಪರಿಣಾಮ''ಗಳಿಂದ ಮಹಿಳೆಯರನ್ನು ರಕ್ಷಿಸಿ: ವಿಶ್ವಸಂಸ್ಥೆ ಒತ್ತಾಯ - ಲಾಕ್​ಡೌನ್

ಕೊರೊನಾ ಮಹಾಮಾರಿಯನ್ನು ತಡೆಗಟ್ಟಲು ಸಾಕಷ್ಟು ರಾಷ್ಟ್ರಗಳಲ್ಲಿ ಲಾಕ್​ ಡೌನ್​ ಘೋಷಣೆಯಾಗಿದೆ. ಈ ವೇಳೆ, ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿರುವ ಆರೋಪ ಅಲ್ಲಲ್ಲಿ ಕೇಳಿಬರುತ್ತಿದೆ. ಇದರಿಂದಾಗಿ ಮಹಿಳೆಯರನ್ನು ರಕ್ಷಿಸಿ ಎಂದು ವಿಶ್ವಸಂಸ್ಥೆಯ ಪ್ರಧಾನಕಾರ್ಯದರ್ಶಿ ಆಗ್ರಹಿಸಿದ್ದಾರೆ

Antonio Guterres
ಆಂಟೋನಿಯೊ ಗುಟೆರೆಸ್
author img

By

Published : Apr 6, 2020, 1:35 PM IST

ವಾಷಿಂಗ್ಟನ್ (ಅಮೆರಿಕ): ಮಾರಕ ಕೊರೊನಾದಿಂದ ಮಹಿಳೆಯರನ್ನು ರಕ್ಷಿಸಿ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಒತ್ತಾಯಿಸಿದ್ದಾರೆ. ಕೊರೊನಾ ವಿರುದ್ಧ ವಿಶ್ವಸಂಸ್ಥೆ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಟ್ವಿಟರ್​ನಲ್ಲಿ ಪ್ರಸ್ತಾಪಿಸಿದ ಅವರು ಮಹಿಳೆಯರನ್ನು ಕೊರೊನಾದಿಂದ ರಕ್ಷಿಸುವಂತೆ ದೇಶಗಳಿಗೆ ಮನವಿ ಮಾಡಿದ್ದಾರೆ.

  • Peace is not just the absence of war. Many women under lockdown for #COVID19 face violence where they should be safest: in their own homes.

    Today I appeal for peace in homes around the world.

    I urge all governments to put women’s safety first as they respond to the pandemic. pic.twitter.com/PjDUTrMb9v

    — António Guterres (@antonioguterres) April 6, 2020 " class="align-text-top noRightClick twitterSection" data=" ">

ಶಾಂತಿಯೆಂದರೆ ಯುದ್ಧದ ಗೈರು ಮಾತ್ರವಲ್ಲ ಎಂದಿರುವ ಅವರು ಕೋವಿಡ್​-19ನಿಂದ ವಿವಿಧ ರಾಷ್ಟ್ರಗಳಲ್ಲಿ ಲಾಕ್​ಡೌನ್​ ಘೋಷಣೆ ಮಾಡಲಾಗಿದ್ದು, ಇದರಿಂದ ಮಹಿಳೆಯರು ಸಾಕಷ್ಟು ತೊಂದರೆಗೆ ಒಳಗಾಗಿದ್ದು, ಹಿಂಸೆ ಅನುಭವಿಸುತ್ತಿದ್ದಾರೆ. ಅವರು ಮನೆಗಳಲ್ಲಿ ಸುರಕ್ಷಿತವಾಗಿರಬೇಕು. ಮಹಿಳೆಯರನ್ನು ರಕ್ಷಿಸುವ ಕೆಲಸವನ್ನು ಅಲ್ಲಿನ ಸರ್ಕಾರಗಳು ಮಾಡಬೇಕು ಎಂದು ಟ್ವಿಟರ್​ನಲ್ಲಿ ಒತ್ತಾಯಿಸಿದ್ದಾರೆ.

ಆರ್ಥಿಕ ಹಾಗೂ ಸಾಮಾಜಿಕ ಒತ್ತಡ ವಿಶ್ವದಲ್ಲಿ ತಳಮಳ ಸೃಷ್ಟಿಸಿದಂತೆಯೇ ಮಹಿಳೆಯರು ಹಾಗೂ ಬಾಲಕಿಯರ ಮೇಲೆ ದೌರ್ಜನ್ಯ ಬಹುಪಾಲು ರಾಷ್ಟ್ರಗಳಲ್ಲಿ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ಗುಟೆರೆಸ್ ಅಮೆರಿಕದ ಕಾಲೇಜು ವಿದ್ಯಾರ್ಥಿಯರು ಲಾಕ್​ ಡೌನ್​ ವೇಳೆ ಲೈಂಗಿಕ ಕಿರುಕುಳಕ್ಕೆ ಒಳಗಾದ ವರದಿಯನ್ನು ಉಲ್ಲೇಖಿಸಿದ್ದಾರೆ. ಇದರ ಜೊತೆಗೆ ಆಫ್ರಿಕಾ ಖಂಡ ರಾಷ್ಟ್ರಗಳಲ್ಲಿ ಶೇಕಡಾ 65ಕ್ಕಿಂತಲೂ ಹೆಚ್ಚು ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಮಹಿಳೆಯರ ಮೇಲಿನ ದೌರ್ಜನ್ಯ ಕೊರೊನಾ ಮಹಾಮಾರಿಯಿಂದ ಹೊರಬರಲು ಮತ್ತಷ್ಟು ಅಡ್ಡಿಗಳನ್ನು ಸೃಷ್ಟಿಸಲಿದೆ ಎಂದಿರುವ ಅವರು ಆದಷ್ಟು ಬೇಗ ಕೊರೊನಾ ಕುರಿತಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಚರ್ಚೆ ನಡೆಸುತ್ತದೆ ಎಂದು ಭರವಸೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.