ನವದೆಹಲಿ: ಬ್ಯಾಕ್ಟೀರಿಯಾ ನಿರೋಧಕ ಮತ್ತು ಜೀನ್‌ಗಳ ವಿರುದ್ಧದ ಜಾಗತಿಕ ಹೋರಾಟದಲ್ಲಿ ಪ್ರಮುಖ ಪ್ರಗತಿಗೆ ಕಾರಣವಾಗಬಹುದಾದ ಸೂಕ್ಷ್ಮಜೀವಿ ವಿರೋಧಿ ಪ್ರತಿರೋಧಕವನ್ನು (ಎಎಂಆರ್) ನಿಭಾಯಿಸಲು ಬ್ರಿಟನ್ ಮತ್ತು ಭಾರತ ಎಂಟು ಮಿಲಿಯನ್ ಪೌಂಡ್ ( 76 ಕೋಟಿ ರೂ.) ಮೌಲ್ಯದ ಐದು ಹೊಸ ಯೋಜನೆಗಳೊಂದಿಗೆ ಸಹಭಾಗಿತ್ವ ಹೊಂದಲಿದೆ.
ದಕ್ಷಿಣ ಏಷ್ಯಾ ಮತ್ತು ಕಾಮನ್‌ವೆಲ್ತ್ ರಾಜ್ಯ ಸಚಿವ ವಿಂಬಲ್ಡನ್‌ನ ಲಾರ್ಡ್ ತಾರಿಕ್ ಅಹ್ಮದ್ ಅವರು ಈ ಘೋಷಣೆ ಮಾಡಿದ್ದಾರೆ ಎಂದು ಬ್ರಿಟಿಷ್ ಹೈಕಮಿಷನ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಔಷಧೀಯ ಉದ್ಯಮದ ಜಾಗತಿಕ ಪೂರೈಕೆಯಲ್ಲಿ ಭಾರತ ಪ್ರಮುಖ ಉತ್ಪಾದಕ ರಾಷ್ಟ್ರವಾಗಿದೆ. ಅನುಮತಿಗಳಿಗೆ ಒಳಪಟ್ಟು ಐದು ಯೋಜನೆಗಳನ್ನು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಚಾಲನೆಗೊಳಿಸಲು ಎರಡೂ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ.
ಅಂತಾರಾಷ್ಟ್ರೀಯ ಸಹಯೋಗಕ್ಕಾಗಿ ಯುಕೆ ರಿಸರ್ಚ್ ಅಂಡ್ ಇನ್ನೋವೇಶನ್ ಫಂಡ್‌ನಿಂದ ನಾಲ್ಕು ಮಿಲಿಯನ್ ಪೌಂಡ್‌ಗಳನ್ನು ನೀಡಲಾಗುತ್ತಿದೆ. ಇದರಿಂದ ಔಷಧ ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಮಹತ್ವದ ಬೆಳವಣಿಗೆ ಆಗಲಿದೆ. ಹಲವು ರೋಗಗಳ ವಿರುದ್ಧ ಹೋರಾಡಲು ಬಲ ಸಿಗಲಿದೆ ಎಂದು ಹೇಳಲಾಗುತ್ತಿದೆ.