ಲಖ್ನೌ: ಉತ್ತರ ಪ್ರದೇಶದಲ್ಲಿ ಫಿಲ್ಮಿ ಸಿಟಿ ನಿರ್ಮಾಣ ಮಾಡುವುದಾಗಿ ಘೋಷಿಸಿದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಪ್ರಸಿದ್ಧ ಗಾಯಕ ಉದಿತ್ ನಾರಾಯಣ್ ಅವರು 'ಲಗಾನ್' ಸಿನಿಮಾದ ಹಾಡೊಂದನ್ನು ಅರ್ಪಿಸಿದ್ದಾರೆ.
ಗಣ್ಯರು ಭಾಗವಹಿಸಿದ್ದ ಸಭೆಯಲ್ಲಿ ಬಾಲಿವುಡ್ ಗಾಯಕ ಉದಿತ್ ನಾರಾಯಣ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿ ಬಾಲಿವುಡ್ನ 'ಲಗಾನ್' ಸಿನಿಮಾದ 'ಮಿತ್ವಾ' ಗೀತೆಯ ಮಧ್ಯದ ಚರಣವನ್ನು ಹಾಡಿದ್ದಾರೆ.
ಉದಿತ್ ನಾರಾಯಣ್ ಹಾಡಿದ ವಿಡಿಯೋ ಕ್ಲಿಪಿಂಗ್ ಅನ್ನು ವಿಶಾಕ್ ಕೊಯಿಪ್ಪುರಥು ಎಂಬುವವರು ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. 'ಯೋಗಿ ಕಹೆ ಸಚ್ ಔರ್ ಸಾಹಸ್ ಹೈ ಜಿಸ್ಕೆ ಮನ್ ಮೇ, ಆಂತ್ ಮೇ ಜೀತ್ ಹುಸಿಕಿ ರಹೆ' (ಯೋಗಿ ಹೇಳುತ್ತಾರೆ ಮನಸ್ಸಿನಲ್ಲಿ ಸತ್ಯ ಮತ್ತು ಧೈರ್ಯವನ್ನು ಹೊಂದಿರುವ ವ್ಯಕ್ತಿ ಅಂತಿಮವಾಗಿ ಗೆಲ್ಲುತ್ತಾನೆ) ಎಂದು ಹಾಡಿದ್ದಾರೆ.
-
Udit Narayan sings a song for UP CM @myogiadityanath ji. pic.twitter.com/yhiFm4POf8
— Visakh Koyippurathu (@VisakhVimala) September 22, 2020 " class="align-text-top noRightClick twitterSection" data="
">Udit Narayan sings a song for UP CM @myogiadityanath ji. pic.twitter.com/yhiFm4POf8
— Visakh Koyippurathu (@VisakhVimala) September 22, 2020Udit Narayan sings a song for UP CM @myogiadityanath ji. pic.twitter.com/yhiFm4POf8
— Visakh Koyippurathu (@VisakhVimala) September 22, 2020
64 ವರ್ಷದ ಗಾಯಕ ಉದಿತ್ ನಾರಾಯಣ್ ಅವರು 2001ರ ಬ್ಲಾಕ್ಬಸ್ಟರ್ ಮೂವಿ ಲಗಾನ್ನ ಪ್ರಸಿದ್ಧ ಹಾಡು ಹಾಡುತ್ತಿದ್ದಂತೆ ಸಭೆಯಲ್ಲಿ ಇದ್ದವರು ಶ್ಲಾಘಿಸಿದರು.
ಆದಿತ್ಯನಾಥ್ ಅವರು ನೋಯ್ಡಾದಲ್ಲಿ ಫಿಲ್ಮ್ ಸಿಟಿ ಸ್ಥಾಪಿಸುವ ಮಹತ್ವಾಕಾಂಕ್ಷೆಯ ಯೋಜನೆ ಘೋಷಿಸಿದ್ದಾರೆ. ಜೊತೆಗೆ ರಾಜ್ಯಕ್ಕೆ ಬರಲು ಇಚ್ಛಿಸುವವರಿಗೆ ಮುಕ್ತ ಪ್ರಸ್ತಾವನೆ ನೀಡಿದ್ದಾರೆ.
ಪ್ರಸ್ತಾವಿತ ಫಿಲ್ಮ್ ಸಿಟಿಯ ಬಗ್ಗೆ ಸಿನಿಮಾ ಉದ್ಯಮದ ನಿರೀಕ್ಷೆಗಳಿಗೆ ತಕ್ಕಂತೆ ಇರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಯೋಜನೆಯ ಬಗ್ಗೆ ಚರ್ಚಿಸಲು ಉದಿತ್ ನಾರಾಯಣ್ ಮತ್ತು ನಟ ಅನುಪಮ್ ಖೇರ್ ಸೇರಿದಂತೆ ಕೆಲವು ಗಣ್ಯರನ್ನು ಭೇಟಿಯಾಗಿದ್ದಾರೆ.