ETV Bharat / bharat

ಬಾಳಾಸಾಹೇಬ್​​ ಠಾಕ್ರೆ ಫೋಟೋ ಎದುರು ತಲೆಬಾಗಿ ನಮಸ್ಕರಿಸಿದ ಉದ್ಧವ್​ ಠಾಕ್ರೆ - ತಂದೆಯ ಮಂದೆ ಠಾಕ್ರೆ ಗೌರವ

ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಉದ್ಧವ್​ ಠಾಕ್ರೆ ಆಯ್ಕೆಗೊಂಡಿದ್ದು, ಇದೇ ತಿಂಗಳ 28ರಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ಉದ್ಧವ್​ ಠಾಕ್ರೆ
Uddhav Thackeray
author img

By

Published : Nov 26, 2019, 10:55 PM IST

Updated : Nov 26, 2019, 11:17 PM IST

ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಶಿವಸೇನೆ ಮುಖ್ಯಸ್ಥ ಉದ್ಧವ್​​ ಠಾಕ್ರೆ ಆಯ್ಕೆಯಾಗಿದ್ದು, ಇದೇ ತಿಂಗಳ​​​ 28ರಂದು ಶಿವಾಜಿ ಪಾರ್ಕ್​​​ನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ನೂತನ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಚುನಾಯಿತರಾಗುತ್ತಿದ್ದಂತೆ ತಮ್ಮ ನಿವಾಸ ಮಾತೋಶ್ರಿಯಲ್ಲಿ ಪಕ್ಷದ ಸಂಸ್ಥಾಪಕ ಮತ್ತು ತಂದೆ ಬಾಳಾಸಾಹೇಬ್​ ಠಾಕ್ರೆ ಫೋಟೋ ಎದುರು ತಲೆಬಾಗಿ ನಮಸ್ಕರಿಸಿ ಗೌರವ ಸಲ್ಲಿಕೆ ಮಾಡಿದ್ದಾರೆ.

ಉದ್ಧವ್​ ಠಾಕ್ರೆ
ಉದ್ಧವ್ ಠಾಕ್ರೆ

ಇದೇ ವೇಳೆ ಮಾತನಾಡಿರುವ ಅವರು ಮಹಾರಾಷ್ಟ್ರದ ಸಿಎಂ ಆಗುತ್ತೇನೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಈಗ ಆ ಅವಕಾಶ ಒದಗಿ ಬಂದಿದ್ದು ಸಧೃಡ ಆಡಳಿತ ನೀಡುವೆ ಎಂದಿದ್ದಾರೆ. ಇದೇ ವೇಳೆ ತಮ್ಮ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್​ ಶಾ ಅವರಿಗೂ ಆಹ್ವಾನ ನೀಡುವುದಾಗಿ ಹೇಳಿದ್ದಾರೆ.

ಕಳೆದ ಒಂದು ತಿಂಗಳಿಂದ ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಾ, ದೇವೇಂದ್ರ ಫಡ್ನವೀಸ್​ ದಿಢೀರ್​ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆ ಹೊಸ ರೂಪ ಪಡೆದುಕೊಂಡಿತ್ತು. ಇದಾದ ಬಳಿಕ ಸುಪ್ರೀಂಕೋರ್ಟ್​ ಬಹುಮತ ಸಾಬೀತು ಮಾಡಲು ಹೇಳಿದ್ದರಿಂದ ಅದರಲ್ಲಿ ವಿಫಲಗೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ರಾಜ್ಯದಲ್ಲಿ ಶಿವಸೇನೆ+ಎನ್​ಸಿಪಿ+ಕಾಂಗ್ರೆಸ್​ ಮೈತ್ರಿ ಸರ್ಕಾರ ರಚನೆ ಮಾಡಲು ಮುಂದಾಗಿವೆ.

Intro:Body:

ಬಾಳಾಸಾಹೇಬ್​​ ಠಾಕ್ರೆ ಫೋಟೋ ಎದುರು ತಲೆಬಾಗಿ  ನಮಸ್ಕರಿಸಿದ ಉದ್ಧವ್​ ಠಾಕ್ರೆ! 

ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಶಿವಸೇನೆ ಮುಖ್ಯಸ್ಥ ಉದ್ಧವ್​​ ಠಾಕ್ರೆ ಆಯ್ಕೆಯಾಗಿದ್ದು, ಡಿಸೆಂಬರ್​​​ 1ರಂದು ಶಿವಾಜಿ ಪಾರ್ಕ್​​​ನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. 

ನೂತನ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಚುನಾಯಿತರಾಗುತ್ತಿದ್ದಂತೆ ತಮ್ಮ ನಿವಾಸ ಮಾತೋಶ್ರಿಯಲ್ಲಿ ಪಕ್ಷದ ಸಂಸ್ಥಾಪಕ ಮತ್ತು ತಂದೆ ಬಾಳಾಸಾಹೇಬ್​ ಠಾಕ್ರೆ ಫೋಟೋ ಎದುರು ತಲೆಬಾಗಿ ನಮಸ್ಕರಿಸಿ ಗೌರವ ಸಲ್ಲಿಕೆ ಮಾಡಿದ್ದಾರೆ. 

ಇದೇ ವೇಳೆ ಮಾತನಾಡಿರುವ ಅವರು ತಾವು ಮಹಾರಾಷ್ಟ್ರದ ಸಿಎಂ ಆಗುತ್ತೇನೆ ಎಂದು ಯಾವತ್ತು ಅಂದುಕೊಂಡಿರಲಿಲ್ಲ. ಈಗ ಆ ಅವಕಾಶ ಒದಗಿ ಬಂದಿದ್ದು ಸಧೃಡ ಆಡಳಿತ ನೀಡುವೆ ಎಂದಿದ್ದಾರೆ. ಇದೇ ವೇಳೆ ತಮ್ಮ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್​ ಶಾ ಅವರಿಗೂ ಆಹ್ವಾನ ನೀಡುವುದಾಗಿ ಹೇಳಿದ್ದಾರೆ. 

Conclusion:
Last Updated : Nov 26, 2019, 11:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.