ಮುಂಬೈ: ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದು ಒಂದು ವಾರವಾಗುತ್ತಾ ಬಂದರೂ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಸರತ್ತು ಇನ್ನೂ ಅಂತ್ಯಕಂಡಿಲ್ಲ.
50-50 ನಿಯಮದಂತೆ ಸರ್ಕಾರ ರಚನೆಯಾಗುತ್ತೆ ಎಂಬುದಾಗಿ ಬಿಜೆಪಿ ಹಾಗೂ ಶಿವಸೇನ ನಡುವೆ ಮಾತುಕತೆ ನಡೆದಿತ್ತು. ಆದರೆ ಇದೀಗ ಹಾಲಿ ಸಿಎಂ ದೇವೇಂದ್ರ ಫಡ್ನವೀಸ್ ಯು ಟರ್ನ್ ಹೊಡೆದಿದ್ದು, ನಾನು 50-50 ಫಾರ್ಮುಲಾ ಬಗ್ಗೆ ಮಾತನಾಡಿಲ್ಲ. ನನ್ನ ಮುಂದೆ ಈ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಅಮಿತ್ ಶಾ ಹಾಗೂ ಉದ್ಧವ್ ಠಾಕ್ರೆಯವರಿಗೆ ಮಾತ್ರ ಈ ನಿರ್ಧಾರದ ಬಗ್ಗೆ ತಿಳಿದಿದ್ದರೆ ಅವರೇ ಈ ಬಗ್ಗೆ ನಿರ್ಧರಿಸುತ್ತಾರೆ ಎಂದು ಫಡ್ನವೀಸ್ ಹೇಳಿದ್ದಾರೆ.
-
Sanjay Raut, Shiv Sena: I don't know what the CM has said. If he is saying that the '50-50 formula' was never discussed, then I think we need to change the definition of truth. What was discussed, regarding the issue the CM is talking about, is known by all. The media was there. pic.twitter.com/VfiXRToNVO
— ANI (@ANI) October 29, 2019 " class="align-text-top noRightClick twitterSection" data="
">Sanjay Raut, Shiv Sena: I don't know what the CM has said. If he is saying that the '50-50 formula' was never discussed, then I think we need to change the definition of truth. What was discussed, regarding the issue the CM is talking about, is known by all. The media was there. pic.twitter.com/VfiXRToNVO
— ANI (@ANI) October 29, 2019Sanjay Raut, Shiv Sena: I don't know what the CM has said. If he is saying that the '50-50 formula' was never discussed, then I think we need to change the definition of truth. What was discussed, regarding the issue the CM is talking about, is known by all. The media was there. pic.twitter.com/VfiXRToNVO
— ANI (@ANI) October 29, 2019
ಸಭೆ ರದ್ದು
ಈ ಬಗ್ಗೆ ಪ್ರತಿಕ್ರಿಯೆ ನೀಡಿದರೂ ಶಿವಸೇನ ನಾಯಕ ಸಂಜಯ್ ರಾವತ್, ಖುದ್ದು ದೇವೇಂದ್ರ ಫಡ್ನವೀಸ್ 50-50 ಫಾರ್ಮುಲಾ ಬಗ್ಗೆ ಶಾ ಹಾಗೂ ಠಾಕ್ರೆ ಮುಂದೆ ಉಚ್ಛರಿಸಿದ್ದರು. ಈಗ ಅವರು ಕ್ಯಾಮರಾ ಮುಂದೆ ಹೇಳಿದ ಮಾತುಗಳನ್ನು ಒಪ್ಪಲು ನಿರಾಕರಿಸುತ್ತಿದ್ದಾರೆ. ಈಗ ಅವರು, ತಾನು 50-50 ಫಾರ್ಮುಲಾಗೆ ಒಪ್ಪಿಲ್ಲ ಎನ್ನುವುದಾದರೆ ನಾವು ಅವರ ಜೊತೆ ಮಾತನಾಡುವುದೇನಿದೆ? ಮುಂದೆ ಚರ್ಚೆ ನಡೆಸುವಂತಹ ವಿಚಾರವಾದರೂ ಏನಿದೆ? ಹೀಗಾಗಿ ಇಂದು 4 ಗಂಟೆಗೆ ಯೋಜಿಸಿದ್ದ ಚರ್ಚೆಯನ್ನು ಉದ್ಧವ್ ಠಾಕ್ರೆ ರದ್ದುಪಡಿಸಿದ್ದಾರೆ ಎಂದು ಸಂಜಯ್ ಹೇಳಿದ್ದಾರೆ.
-
Sanjay Raut, Shiv Sena: Discussions between BJP-Shiv Sena were scheduled for 4 pm today. But if the CM himself is saying that the '50-50 formula' was not discussed then what will we even talk about? On what basis should we talk to them? So Uddhav ji has cancelled today's meeting pic.twitter.com/duyYQpCQtn
— ANI (@ANI) October 29, 2019 " class="align-text-top noRightClick twitterSection" data="
">Sanjay Raut, Shiv Sena: Discussions between BJP-Shiv Sena were scheduled for 4 pm today. But if the CM himself is saying that the '50-50 formula' was not discussed then what will we even talk about? On what basis should we talk to them? So Uddhav ji has cancelled today's meeting pic.twitter.com/duyYQpCQtn
— ANI (@ANI) October 29, 2019Sanjay Raut, Shiv Sena: Discussions between BJP-Shiv Sena were scheduled for 4 pm today. But if the CM himself is saying that the '50-50 formula' was not discussed then what will we even talk about? On what basis should we talk to them? So Uddhav ji has cancelled today's meeting pic.twitter.com/duyYQpCQtn
— ANI (@ANI) October 29, 2019
288 ಕ್ಷೇತ್ರಗಳ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 105, ಶಿವಸೇನ 56, ಕಾಂಗ್ರೆಸ್ 44 ಹಾಗೂ ಎನ್ಸಿಪಿ 54 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಬಿಜೆಪಿ-ಶಿವಸೇನ ಮತ್ತು ಕಾಂಗ್ರೆಸ್-ಎನ್ಸಿಪಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದವು. ಹೀಗಾಗಿ 50-50 ಫಾರ್ಮುಲಾಗೆ ಶಿವಸೇನೆ ಬೇಡಿಕೆ ಇಟ್ಟಿತ್ತು.