ETV Bharat / bharat

ಎರ್ನಾಕುಲಂ ಕಲ್ಲು ಕ್ವಾರಿಯಲ್ಲಿ ಸ್ಫೋಟ: ಚಾಮರಾಜನಗರದ ಕಾರ್ಮಿಕ ಸೇರಿ ಇಬ್ಬರ ಸಾವು

ಕಲ್ಲಿನ ಕ್ವಾರಿಯಲ್ಲಿ ಸ್ಫೋಟಗೊಂಡು ರಾಜ್ಯದ ಓರ್ವ ಕಾರ್ಮಿಕ ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ.

explosion at a quarry
ಕಲ್ಲು ಕ್ವಾರಿಯಲ್ಲಿ ಸ್ಫೋಟ
author img

By

Published : Sep 21, 2020, 8:50 AM IST

Updated : Sep 21, 2020, 9:09 AM IST

ಎರ್ನಾಕುಲಂ (ಕೇರಳ): ಕಲ್ಲು ಕ್ವಾರಿಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕರ್ನಾಟಕದ ಓರ್ವ ಕಾರ್ಮಿಕ ಸೇರಿದಂತೆ ಇಬ್ಬರು ವಲಸೆ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಎರ್ನಾಕುಲಂ ಜಿಲ್ಲೆಯ ಮಲಯತ್ತೂರ್​​ನಲ್ಲಿ ನಡೆದಿದೆ.

ಕಲ್ಲು ಕ್ವಾರಿಯಲ್ಲಿ ಸ್ಫೋಟ

ಮೃತಪಟ್ಟವರನ್ನು ಚಾಮರಾಜನಗರದ ನಾಗ ಡಿ. (34), ಇನ್ನೊಬ್ಬ ತಮಿಳುನಾಡಿನ ಸೇಲಂ ನಿವಾಸಿ ಪೆರಿಯಣ್ಣನ್(38)​​ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಲಾಕ್​ಡೌನ್ ನಂತರ ಕೆಲಸಕ್ಕೆ ಆಗಮಿಸಿದ್ದರು.

ಕೊಠಡಿಯಲ್ಲಿ ಸಂಗ್ರಹಿಸಿಟ್ಟಿದ್ದ ಸ್ಫೋಟಕಗಳು ಬ್ಲಾಸ್ಟ್​ ಆಗಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಕಲಡಿ ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತದೇಹಗಳನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇಂದು ನಸುಕಿನ ಜಾವ 3:30ರ ಸುಮಾರಿಗೆ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದ್ದು, ಕ್ವಾರಿ ಮಾಲೀಕರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.

Last Updated : Sep 21, 2020, 9:09 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.