ಅವಂತಿಪೋರಾ : ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಪಟ್ಟಣದಲ್ಲಿ ಇಂದು ನಡೆದ ಗುಂಡಿನ ದಾಳಿಯಲ್ಲಿ ಭದ್ರತಾ ಪಡೆಗಳು ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಇನ್ನೊಂದೆಡೆ ಹರಿ-ಪರಿ ಪ್ರದೇಶದಲ್ಲಿ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಕಾಳಗ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಡಿಪೋರಾ ಪೊಲೀಸರು, ಸೇನೆ ಮತ್ತು ಸಿಆರ್‌ಪಿಎಫ್ ಜಂಟಿ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳ ಏಳು ಹಾರ್ಡ್‌ಕೋರ್ ಭೂಗತ ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂಬ ಕಾಶ್ಮೀರ ಜೋನ್ ಪೊಲೀಸ್ ತನ್ನ ಪೋಸ್ಟ್ ರಿಟ್ವೀಟ್ ಮಾಡಿದೆ.
-
#Awantipora #encounter update: In the exchange of fire two #terrorists have been #killed. Operation is in progress. Further details shall follow. @JmuKmrPolice https://t.co/CYDf1FB49t
— Kashmir Zone Police (@KashmirPolice) January 25, 2020 " class="align-text-top noRightClick twitterSection" data="
">#Awantipora #encounter update: In the exchange of fire two #terrorists have been #killed. Operation is in progress. Further details shall follow. @JmuKmrPolice https://t.co/CYDf1FB49t
— Kashmir Zone Police (@KashmirPolice) January 25, 2020#Awantipora #encounter update: In the exchange of fire two #terrorists have been #killed. Operation is in progress. Further details shall follow. @JmuKmrPolice https://t.co/CYDf1FB49t
— Kashmir Zone Police (@KashmirPolice) January 25, 2020
ಮೋಸ್ಟ್ ವಾಂಟೆಡ್ ಭಯೋತ್ಪಾದಕ ಅಬು ಸೈಫುಲ್ಲಾ ಮತ್ತು ಅಬು ಖಾಸಿಮ್ ಕಳೆದ ಒಂದೂವರೆ ವರ್ಷಗಳಿಂದ ಭಯೋತ್ಪಾದನೆ ಪೀಡಿತ ದಕ್ಷಿಣ ಕಾಶ್ಮೀರದಲ್ಲಿ ಸಕ್ರಿಯರಾಗಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.