ಶ್ರೀನಗರ (ಜಮ್ಮು ಕಾಶ್ಮೀರ): ಇಬ್ಬರು ಶಂಕಿತ ಉಗ್ರರನ್ನು ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಖಾಜಿಗುಂಡ್ ಎಂಬಲ್ಲಿಯ ಜವಾಹರ್ ಟನಲ್ ಏರಿಯಾದಲ್ಲಿ ಭಾರತೀಯ ಸೇನೆಯ ಯೋಧರು ಬಂಧಿಸಿದ್ದಾರೆ.
ಜಮ್ಮು ಪ್ರದೇಶದಿಂದ ಕಾಶ್ಮೀರಕ್ಕೆ ತೆರಳುತ್ತಿದ್ದ JK22B-1737 ನೋಂದಣಿಯ ಟ್ರಕ್ ಅನ್ನು ತಡೆದು ಅದರಲ್ಲಿದ್ದ ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಇದರ ಜೊತೆಗೆ ಹಲವಾರು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.
ಟ್ರಕ್ನಲ್ಲಿದ್ದ ವ್ಯಕ್ತಿಗಳನ್ನು ಚೋಟಿಪೋರಾ ಶೋಪಿಯಾನ್ ಪ್ರದೇಶದ ಬಿಲಾಲ್ ಅಹ್ಮದ್ ಕುಟ್ಟೆ ಹಾಗೂ ಶನವಾಜ್ ಅಹ್ಮದ್ ಮೀರ್ ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಉಗ್ರರೆಂದು ಶಂಕಿಸಲಾಗಿದ್ದು, ಇವರ ವಿಚಾರಣೆ ನಡೆಯುತ್ತಿದೆ.
ಇದಕ್ಕೂ ಮೊದಲು ಚೋಟಿಪೋರಾ ಶೋಪಿಯಾನ್ ಪ್ರದೇಶಯಲ್ಲಿ ಶಂಕಿತ ಉಗ್ರರು ಅಡಗಿಸಿಟ್ಟಿದ್ದ ಮಷಿನ್ ಗನ್, ಮದ್ದುಗುಂಡು ಹಾಗೂ ಶಸ್ತ್ರಾಸ್ತ್ರಗಳನ್ನು ಪೊಲೀಸರು ಮತ್ತು ಸೇನಾ ಪಡೆಯ ಯೋಧರು ವಶಕ್ಕೆ ಪಡೆದಿದ್ದರು.