ಕಾನ್ಪುರ (ಉತ್ತರ ಪ್ರದೇಶ): ಇಲ್ಲಿನ ಮುಗಂಜ್ ಪ್ರದೇಶದಲ್ಲಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ನಾಲ್ಕು ಅಂತಸ್ತಿನ ಕಟ್ಟಡದ ಒಂದು ಭಾಗ ಕುಸಿದ ಪರಿಣಾಮ ತಾಯಿ ಮತ್ತು ಮಗಳು ಮೃತಪಟ್ಟಿದ್ದಾರೆ. ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ವರದಿಯಾಗಿದೆ.
ಮೀನಾ ಮತ್ತು ಅವರ ಮಗಳು ಪ್ರೀತಿ ಮೃತಪಟ್ಟ ದುರ್ದೈವಿಗಳು. ಎಸ್‌ಡಿಆರ್‌ಎಫ್ ಸಹಾಯದಿಂದ ಅಗ್ನಿಶಾಮಕ ದಳವು ಸತತ ಐದು ಗಂಟೆಗಳ ಕಾರ್ಯಾಚರಣೆ ನಡೆಸಿ ಕಟ್ಟಡದ ಅವಶೇಷಗಳಿಂದ ಮೃತದೇಹಗಳನ್ನು ಹೊರತೆಗೆದಿದೆ. ಪೊಲೀಸ್ ತಂಡ, ನಗರ ನಿಗಮ್ ಮತ್ತು ನಾಗರಿಕ ಆಡಳಿತ ಸದಸ್ಯರು ಕಾರ್ಯಾಚರಣೆಯಲ್ಲಿ ಇದ್ದರು.
ಶತಮಾನದ ಹಳೆಯದಾದ ಕಟ್ಟಡದ ಮೂರನೇ ಮಹಡಿಯಲ್ಲಿ ಅವರು ವಾಸಿಸುತ್ತಿದ್ದರು. ಭಾರಿ ಮಳೆಯಿಂದಾಗಿ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಇತರ ನಿವಾಸಿಗಳು ಮುಂಜಾಗ್ರತೆಯಿಂದ ಹೊರನಡೆದಿದ್ದಾರೆ. ಆದರೆ, ತಾಯಿ ಮತ್ತು ಮಗಳು ಕಟ್ಟಡದಲ್ಲಿ ಸಿಕ್ಕಿ ಬಿದ್ದಿದ್ದಾರೆ.