ETV Bharat / bharat

ಪೊಲೀಸರ​ ಮುಂದೆ ಶರಣಾಗಿ ತಪ್ಪೊಪ್ಪಿಕೊಂಡ ಇಬ್ಬರು ನಕ್ಸಲರು

ಬಾಲ್​ದೇವ್​ ಮತ್ತು ಜೈರಾಮ್ ಇಬ್ಬರು ನಕ್ಸಲರು ಶರಣಾಗಿದ್ದು ಇವರ ನಡೆಯನ್ನು ಪೊಲೀಸ್​ ವರಿಷ್ಠಾಧಿಕಾರಿ ಮೋಹಿತ್ ಗರ್ಗ್ ಸ್ವಾಗತಿಸಿದ್ದಾರೆ.

Two Naxals surrender in Chhattisgarh's Narayanpur
ಪೊಲೀಸರ​ ಮುಂದೆ ಶರಣಾಗಿ ತಪ್ಪೊಪ್ಪಿಕೊಂಡ ಇಬ್ಬರು ನಕ್ಸಲರು
author img

By

Published : Aug 23, 2020, 12:01 AM IST

ನಾರಾಯಣಪುರ (ಛತ್ತೀಸ್‍ಗಢ​): ಜಿಲ್ಲೆಯಲ್ಲಿ ಶನಿವಾರ ತಲಾ ಒಂದು ಲಕ್ಷ ರೂ.ಗಳ ಇನಾಮು ಹೊಂದಿದ್ದ ಇಬ್ಬರು ನಕ್ಸಲರು ಪೊಲೀಸರ ಮುಂದೆ ಶರಣಾಗುವ ಮೂಲಕ ತಾವು ಮಾಡಿದ ಕೃತ್ಯಗಳನ್ನು ಒಪ್ಪಿಕೊಂಡಿದ್ದಾರೆ.

ನಾರಾಯಣಪುರ ಪೊಲೀಸ್​ ವರಿಷ್ಠಾಧಿಕಾರಿ ಮೋಹಿತ್ ಗರ್ಗ್ ಅವರ ಸಮ್ಮುಖದಲ್ಲಿ ಬಾಲ್​ದೇವ್​ ಮತ್ತು ಜೈರಾಮ್ ಎಂಬ ಇಬ್ಬರು ನಕ್ಸಲರು ಶರಣಾದರು. ಅಲ್ಲದೇ ಇದೇ ವೇಳೆ ಸಾರ್ವಜನಿಕ ಮುಖ್ಯವಾಹಿನಿಗೆ ಬರುವುದಾಗಿ ಇಚ್ಛೆ ವ್ಯಕ್ತಪಡಿಸಿದರು.

ಬಾಲ್​ದೇವ್​ ಮತ್ತು ಜೈರಾಮ್ ಬಹಳ ಚಿಕ್ಕ ವಯಸ್ಸಿನಲ್ಲಿಯೇ ನಕ್ಸಲ್​ ವಾಹಿನಿಗೆ ಸೇರಿದ್ದರು. ಟೊಳ್ಳು ಸಿದ್ಧಾಂತದಿಂದ ಬೇಸರಗೊಂಡು ಇದೀಗ ಶರಣಾಗಲು ನಿರ್ಧರಿಸಿದ್ದಾರೆ ಎಂದು ಅಧಿಕಾರಿ ಗರ್ಗ್ ಮಾಹಿತಿ ನೀಡಿದರು.

ಬಾಲ್​ದೇವ್ 2012 ರಲ್ಲಿ ನಕ್ಸಲ್​ ಗುಂಪು ಸೇರಿಕೊಂಡರೆ 15 ನೇ ವಯಸ್ಸಿನಲ್ಲಿ ಜೈರಾಮ್ ಅವನ ಮಾರ್ಗವನ್ನೇ ಅನುಸರಿಸಿದ್ದ. ಇದೀಗ ಅವರು ಮಾಡಿದ ತಪ್ಪು ಅವರಿಗೆ ಅರಿವಾಗಿದೆ. ಎಲ್ಲವನ್ನೂ ಮರೆತು ಶರಣಾಗಲು ನಿರ್ಧರಿಸಿದ್ದಾರೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಗರ್ಗ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.