ETV Bharat / bharat

ಇಬ್ಬರು ಸಹೋದರಿಯರ ಮೇಲೆ ಅತ್ಯಾಚಾರ, ವಿಷ ಸೇವನೆ: ಮೂವರು ಆರೋಪಿಗಳ ಬಂಧನ - ಪಶ್ಚಿಮ ಬಂಗಾಳ ಸುದ್ದಿ

ಅತ್ಯಾಚಾರಕ್ಕೊಳಗಾಗಿದ್ದ ಇಬ್ಬರು ಸಹೋದರಿಯರು ವಿಷ ಪ್ರಾಶನ ಮಾಡಿದ್ದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿತ್ತು. ಇದೀಗ ಪ್ರಕರಣದಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳ ಬಂಧನ ಮಾಡಲಾಗಿದೆ.

Two minor tribal sisters
Two minor tribal sisters
author img

By

Published : Sep 8, 2020, 10:07 PM IST

ಕೋಲ್ಕತ್ತಾ: ಇಬ್ಬರು ಅಪ್ರಾಪ್ತ ಸಹೋದರಿಯರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಪಶ್ಚಿಮ ಬಂಗಾಳದ ರಾಜ್​ಗಂಜ್​ ಪ್ರದೇಶದಲ್ಲಿ ಸೆಪ್ಟೆಂಬರ್​​ 4ರಂದು ನಡೆದಿದ್ದು, ಇದರ ಬಳಿಕ ಇಬ್ಬರು ವಿಷ ಸೇವನೆ ಮಾಡಿದ್ದರು. ಕೃತ್ಯವೆಸಗಿರುವ ಆರೋಪಿಗಳಲ್ಲಿ ಮೂವರ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

  • Jalpaiguri: Two sisters, both minors, who were allegedly gang-raped in Rajganj area consumed poison. One died yesterday while the other is in stable condition. Police says, "Three accused have been arrested; efforts on to nab other accused." #WestBengal pic.twitter.com/ozQnQ0Pk8c

    — ANI (@ANI) September 8, 2020 " class="align-text-top noRightClick twitterSection" data=" ">

ವಿಷ ಪ್ರಾಶನ ಮಾಡಿದ ಇಬ್ಬರಲ್ಲಿ ಓರ್ವ ಬಾಲಕಿ ಸಾವನ್ನಪ್ಪಿದ್ದು, ಮತ್ತೋರ್ವ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಇತರರಿಗಾಗಿ ಶೋಧಕಾರ್ಯ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬುಡಕಟ್ಟು ಜನಾಂಗಕ್ಕೆ ಸೇರಿದ್ದ ಇಬ್ಬರು ಬಾಲಕಿಯರ ವಯಸ್ಸು ಕ್ರಮವಾಗಿ 16 ಮತ್ತು 14 ಎಂದು ತಿಳಿದು ಬಂದಿದೆ. ಸೆಪ್ಟೆಂಬರ್​​​ 4ರಂದು ಈ ಘಟನೆ ನಡೆದಿತ್ತು. ಇದಾದ ಬಳಿಕ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ವಿಷ ಸೇವನೆ ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.