ETV Bharat / bharat

ಪಾಕ್​ನಲ್ಲಿ ಹುಟ್ಟಿದ ಹಿಂದೂ ವಧು - ವರರು... ಭಾರತಕ್ಕೆ ಬಂದು ಮ್ಯಾರೇಜ್​, ಇಲ್ಲೇ ಇರಲು ನಿರ್ಧಾರ!

ಆರ್ಟಿಕಲ್​ 370 ರದ್ದುಗೊಂಡ ಬಳಿಕ ಪಾಕ್​ನಲ್ಲಿ ಹಿಂಸಾತ್ಮಕ ಕೃತ್ಯಗಳು ನಡೆಯುತ್ತಿರುವ ಕಾರಣ, ಅಲ್ಲಿನ ಹಿಂದೂ ವಧು - ವರ ಭಾರತಕ್ಕೆ ಬಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಘಟನೆ ನಡೆದಿದೆ.

author img

By

Published : Aug 19, 2019, 7:38 PM IST

Updated : Aug 19, 2019, 7:45 PM IST

ಪಾಕ್​ನಲ್ಲಿ ಹುಟ್ಟಿದ ಹಿಂದೂ ಜೋಡಿ

ರಾಜಕೋಟ್​​​(ಗುಜರಾತ್​): ಪಾಕಿಸ್ತಾನದಲ್ಲಿ ಹುಟ್ಟಿದ್ದ ಹಿಂದೂ ಸಮುದಾಯದ ವಧು-ವರ ಇದೀಗ ಭಾರತಕ್ಕೆ ಬಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ನಡೆದಿದ್ದು, ಕಳೆದ ಶನಿವಾರದಂದು ಹಿಂದೂ ಸಂಪ್ರದಾಯದಂತೆ ಇವರು ವೈವಾಹಿಕ ಜೀವನಕ್ಕೆ ದಾಪುಗಾಲಿಟ್ಟಿದ್ದಾರೆ.

ಪಾಕ್​ನಲ್ಲಿ ಹುಟ್ಟಿದ ಹಿಂದೂ ಜೋಡಿ

ಜಮ್ಮು - ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್​ 370 ರದ್ದುಗೊಂಡ ಬಳಿಕ, ಪಾಕ್​​ನಲ್ಲಿ ಹಿಂಸಾಚಾರದಂತಹ ಹೇಯ ಕೃತ್ಯ ನಡೆಯುತ್ತಿವೆ. ಹೀಗಾಗಿ ಕರಾಚಿಯಲ್ಲಿದ್ದ ಮಹೇಶ್ವರಿ ಸಮುದಾಯದ ಎರಡು ಮದುವೆ ಜೋಡಿ ಅಲ್ಲಿಂದ ಗುಜರಾತ್​ನ ರಾಜಕೋಟ್​ಗೆ ಪ್ರಯಾಣ ಬೆಳೆಸಿ ಸಪ್ತಪದಿ ತುಳಿದಿದೆ.

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಹೇಶ್ವರಿ ಸಮುದಾಯದ ಅಧ್ಯಕ್ಷ ಭವಿಷ್ಯ ಮಹೇಶ್ವರಿ, ಇಲ್ಲಿಯವರೆಗೂ ತಾವು ಪಾಕ್​​ನ 90 ದಂಪತಿಗಳಿಗೆ ಮದುವೆ ಮಾಡಿಸಿರುವುದಾಗಿ ಹೇಳಿದ್ದಾರೆ. ಜತೆಗೆ ಅವರು ಭಾರತದಲ್ಲೇ ಉಳಿದುಕೊಂಡು ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕಳೆದ ಶನಿವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಾಕ್​​ನ ದಂಪತಿಗಳು, ತಾವು ಭಾರತದಲ್ಲೇ ಇರಲು ನಿರ್ಧರಿಸಿದ್ದು, ಹಿಂದೂ ಸಮುದಾಯದಕ್ಕೆ ಪಾಕ್​​ನಲ್ಲಿ ಬಹಳಷ್ಟು ಕಿರುಕುಳ ನೀಡಲಾಗುತ್ತಿದೆ ಎಂದು ತಮ್ಮ ಅಳಲು ತೊಡಿಕೊಂಡಿದ್ದಾರೆ. ಸದ್ಯ ಕರಾಚಿಯಲ್ಲಿ 3 ಸಾವಿರಕ್ಕೂ ಹೆಚ್ಚು ಮಹೇಶ್ವರಿ ಸಮುದಾಯದ ಕುಟುಂಬಗಳು ವಾಸವಾಗಿವೆ. ಅವರೆಲ್ಲರೂ ಭಾರತದಲ್ಲಿ ಬಂದು ನೆಲೆಸಲು ಉಸ್ತುಕರಾಗಿದ್ದಾರೆ ಎಂದು ಮದುವೆ ಆಗಿರುವ ಜೋಡಿ ತಿಳಿಸಿದೆ.

Intro:Body:

ರಾಜಕೋಟ್​​​(ಗುಜರಾತ್​): ಪಾಕಿಸ್ತಾನದಲ್ಲಿ ಹುಟ್ಟಿದ್ದ ಹಿಂದೂ ವಧು-ವರ ಇದೀಗ ಭಾರತಕ್ಕೆ ಬಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ನಡೆದಿದ್ದು, ಕಳೆದ ಶನಿವಾರದಂದು ಹಿಂದೂ ಸಂಪ್ರದಾಯದಂತೆ ಇವರು ವೈವಾಹಿಕ ಜೀವನಕ್ಕೆ ದಾಪುಗಾಲಿಟ್ಟಿದ್ದಾರೆ. 

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್​ 370 ರದ್ದುಗೊಂಡ ಬಳಿಕ, ಪಾಕ್​​ನಲ್ಲಿ ಹಿಂಸಾಚಾರದಂತಹ ಹೇಯ ಕೃತ್ಯ ನಡೆಯುತ್ತಿವೆ. ಹೀಗಾಗಿ ಕರಾಚಿಯಲ್ಲಿದ್ದ ಮಹೇಶ್ವರಿ ಸಮುದಾಯದ ವಧು-ವರ ಅಲ್ಲಿಂದ ಗುಜರಾತ್​ನ ರಾಜಕೋಟ್​ಗೆ ಪ್ರಯಾಣ ಬೆಳೆಸಿ ಮ್ಯಾರೇಜ್​ ಆಗಿದ್ದಾರೆ. 

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಹೇಶ್ವರಿ ಸಮುದಾಯದ ಅಧ್ಯಕ್ಷ ಭವಿಷ್ಯ ಮಹೇಶ್ವರಿ, ಇಲ್ಲಿಯವರೆಗೂ ತಾವು ಪಾಕ್​​ನ 90 ದಂಪತಿಗಳಿಗೆ ಮದುವೆ ಮಾಡಿಸಿರುವುದಾಗಿ ಹೇಳಿದ್ದಾರೆ. ಜತೆಗೆ ಅವರು ಭಾರತದಲ್ಲೇ ಉಳಿದುಕೊಂಡು ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. 

ಕಳೆದ ಶನಿವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಾಕ್​​ನ ದಂಪತಿಗಳು, ತಾವು ಭಾರತದಲ್ಲೆ ಇರಲು ನಿರ್ಧರಿಸಿದ್ದು, ಹಿಂದೂ ಸಮುದಾಯದಕ್ಕೆ ಪಾಕ್​​ನಲ್ಲಿ ಬಹಳಷ್ಟು ಕಿರುಕುಳ ನೀಡುತ್ತಿದ್ದಾರೆಂದು ತಮ್ಮ ಅಳಲು ತೊಡಿಕೊಂಡಿದ್ದಾರೆ. ಸದ್ಯ ಕರಾಚಿಯಲ್ಲಿ 3 ಸಾವಿರಕ್ಕೂ ಹೆಚ್ಚು ಮಹೇಶ್ವರಿ ಸಮುದಾಯದ ಫ್ಯಾಮಿಲಿ ವಾಸವಾಗಿದ್ದು, ಅವರೆಲ್ಲರೂ ಭಾರತದಲ್ಲಿ ಬಂದು ನೆಲೆಸಲು ಉಸ್ತುಕರಾಗಿದ್ದಾರೆ ಎಂದು ತಿಳಿಸಿದ್ದಾರೆ. 

Conclusion:
Last Updated : Aug 19, 2019, 7:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.