ಬರೇಲಿ (ಉತ್ತರಪ್ರದೇಶ): ಮನೆ ಮಾಲೀಕನೊಂದಿಗೆ ಜಗಳವಾಡಿದ ಯುವಕರು ಕಚ್ಚಾ ಬಾಂಬ್ನಿಂದ ಆತನನ್ನು ಬೆದರಿಸಿ ಆಸ್ತಿ-ಪಾಸ್ತಿ ಹಾನಿಗೊಳಿಸಲು ಸ್ಕೆಚ್ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಇಲ್ಲಿನ ಖೇಲಂ ಗ್ರಾಮದ ಬಬ್ಲು, ಜೈವೀರ್ ಮತ್ತು ಹಲೀನ್ ಎಂಬುವರು ಮನೆ ಮಾಲೀಕ ಖಾನ್ ಸಿಂಗ್ನೊಂದಿಗೆ ಜಗಳವಾಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದ್ದು, ಆತನ ಆಸ್ತಿಯನ್ನು ಹಾನಿಗೊಳಿಸಲು ಮತ್ತು ಬೆದರಿಕೆ ಹಾಕಲು ಮೂವರು ಸ್ಕೆಚ್ ಹಾಕಿದ್ದಾರೆ. ಹೀಗಾಗಿ ಯುವಕರು ಕಚ್ಚಾ ಬಾಂಬ್ಗಳನ್ನು ತಂದು ಸಿಂಗ್ರ ಮನೆಯಲ್ಲಿಟ್ಟಿದ್ದರು.
ಇದರ ಬಗ್ಗೆ ಮಾಲೀಕ ಸಿಂಗ್ಗೆ ತಿಳಿದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸುದ್ದಿ ತಿಳಿದ ಪೊಲೀಸರು ಮನೆ ಪರಿಶೀಲಿಸಿದಾಗ 16 ಕಚ್ಚಾ ಬಾಂಬ್ಗಳು ದೊರೆತಿದ್ದು, ಕೂಡಲೇ ಬಬ್ಲು ಮತ್ತು ಜೈವೀರ್ನನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ಹಲೀನ್ ಪರಾರಿಯಾಗಿದ್ದಾನೆ.
ಆರೋಪಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಮಾಲೀಕ ಸಿಂಗ್ರ ಆಸ್ತಿ-ಪಾಸ್ತಿಗೆ ಹಾನಿ ಮಾಡಲು ಕಚ್ಚಾ ಬಾಂಬ್ಗಳನ್ನು ತಂದಿದ್ದೇವೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.
ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.