ETV Bharat / bharat

ತಪ್ಪಿಸಿಕೊಳ್ಳುವ ಭರದಲ್ಲಿ ಮಾಲೀಕನ ಕೈಗೆ ಮೊಬೈಲ್​ ಕೊಟ್ಟು ಪರಾರಿಯಾದ ಕಳ್ಳ! - two entered in gold shop with gun to rob

ಚಿನ್ನ ಕದಿಯಲು ಬಂದ ಕಳ್ಳನೊಬ್ಬ ಮಾಲೀಕನ ಕೈಗೆ ಸಿಕ್ಕಿಬಿದ್ದಿದ್ದಾನೆ. ಆಗ ಇಬ್ಬರ ನಡುವೆ ಸಂಘರ್ಷ ನಡೆದಿದ್ದು, ಕಳ್ಳನ ಕೈಯಲ್ಲಿದ್ದ ಮೊಬೈಲ್​ನನ್ನು ಮಾಲೀಕ ಕಸಿದುಕೊಂಡಿರುವ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.

ಮಾಲೀಕನ ಕೈಗೆ ಮೊಬೈಲ್​ ಕೊಟ್ಟು ಪರಾರಿಯಾದ ಕಳ್ಳ

author img

By

Published : Feb 9, 2021, 7:27 PM IST

Updated : Feb 9, 2021, 7:42 PM IST

ಆಂಧ್ರಪ್ರದೇಶ: ಚಿನ್ನದ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳರಿಬ್ಬರಲ್ಲಿ ಓರ್ವ ಮಾಲೀಕನಿಗೆ ಗನ್​ ತೋರಿಸಿ ಕದಿಯಲು ಮುಂದಾಗಿದ್ದಾನೆ. ಆಗ ಮಾಲೀಕ ಅವನನ್ನು ಹಿಡಿಯಲು ಮುಂದಾಗಿದ್ದು, ಕಳ್ಳ ತಪ್ಪಿಸಿಕೊಳ್ಳುವ ಭರದಲ್ಲಿ ಮೊಬೈಲ್​ ಬಿಟ್ಟು ಹೋಗಿರುವ ಘಟನೆ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.

ತಪ್ಪಿಸಿಕೊಳ್ಳುವ ಭರದಲ್ಲಿ ಮಾಲೀಕನ ಕೈಗೆ ಮೊಬೈಲ್​ ಕೊಟ್ಟು ಪರಾರಿಯಾದ ಕಳ್ಳ

ಬೈಕಿನಲ್ಲಿ ಬಂದ ಇಬ್ಬರು ಕಳ್ಳರಲ್ಲಿ, ಒಬ್ಬ ಅಂಗಡಿಯೊಳಗೆ ಹೋಗಿದ್ರೆ ಮತ್ತೊಬ್ಬ ಹೊರಗಡೆ ನಿಂತುಕೊಂಡು ನೋಡುತ್ತಿರುತ್ತಾನೆ. ಹೀಗೆ ಆಭರಣಗಳನ್ನು ನೋಡುತ್ತಾ ಆತ ತನ್ನ ಜೇಬಿನಿಂದ ಗನ್​ ತೆಗೆದು ಮಾಲೀಕನಿಗೆ ತೋರಿಸಿ ಚಿನ್ನವನ್ನು ಕದಿಯಲು ಮುಂದಾಗುತ್ತಾನೆ. ಆಗ ಮಾಲೀಕ ವಾಸುದೇವ್ ಮತ್ತು ಕಳ್ಳನ ನಡುವೆ ಸಂಘರ್ಷ ನಡೆದು, ಕಳ್ಳ ಓಡುವ ಭರದಲ್ಲಿ ಮೊಬೈಲ್​ ಅನ್ನು ಮಾಲೀಕನ ಕೈಯಲ್ಲೇ ಬಿಟ್ಟು ಓಡುತ್ತಾನೆ.

ಓದಿ: ದಲಿತ ವರನ ಮದುವೆ ಮೆರವಣಿಗೆಗೆ ಅಡ್ಡಿ: 8 ಜನರ ಬಂಧನ

ಕಳ್ಳ ಮತ್ತು ಮಾಲೀಕನ ನಡುವೆ ನಡೆದ ಈ ಸಂಘರ್ಷದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ನಂತರ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಘಟನೆಯ ಬಗ್ಗೆ ತನಿಖೆ ನಡೆಸಿದರು.

Last Updated : Feb 9, 2021, 7:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.