ETV Bharat / bharat

ತೈಲ ಬಾವಿಯ ಬೆಂಕಿ ನಂದಿಸಲು ತೆರಳಿ ಮೃತಪಟ್ಟ ಅಗ್ನಿಶಾಮಕ ಸಿಬ್ಬಂದಿಗೆ  ಸರ್ಕಾರಿ ಗೌರವ

ಬಾಗ್ಜನ್ ತೈಲ ಬಾವಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಇಬ್ಬರು ಅಗ್ನಿಶಾಮಕ ದಳದ ಸಿಬ್ಬಂದಿ ಡುರ್ಲೋವ್ ಗೊಗೊಯ್ ಮತ್ತು ತಿಖೇಶ್ವರ ಗೋಹೈನ್ ಸಾವನ್ನಪ್ಪಿದ್ದು, ಅವರಿಗೆ ರಾಜ್ಯ ಸರ್ಕಾರ ಗೌರವಿಸಿ ನಮನ ಸಲ್ಲಿಕೆ ಮಾಡಿದೆ.

fire in oil well
fire in oil well
author img

By

Published : Jun 11, 2020, 2:21 PM IST

ಗುವಾಹಟಿ( ಅಸ್ಸೋಂ): ಬಾಗ್ಜನ್ ತೈಲ ಬಾವಿಯಲ್ಲಿ ಬೆಂಕಿ ಉರಿಯುತ್ತಲೇ ಇದೆ. ಇಬ್ಬರು ಒಐಎಲ್ ಅಗ್ನಿಶಾಮಕ ದಳದ ಸಿಬ್ಬಂದಿ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಡುರ್ಲೋವ್ ಗೊಗೊಯ್ ಮತ್ತು ತಿಖೇಶ್ವರ ಗೋಹೈನ್ ಅವರ ಕುಟುಂಬಗಳಿಗೆ ತಕ್ಷಣ ಪರಿಹಾರ ನೀಡಲಾಗುವುದು ಎಂದು ಒಐಎಲ್ ಇಂಡಿಯಾ ಲಿಮಿಟೆಡ್ ಪ್ರಕಟಣೆಯಲ್ಲಿ ತಿಳಿಸಿದೆ.

ಇಬ್ಬರು ಅಗ್ನಿಶಾಮಕ ದಳದ ಸಿಬ್ಬಂದಿ ಅಂತಿಮ ವಿಧಿ ವಿಧಾನಗಳನ್ನು ರಾಜ್ಯ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುವುದು ಎಂದು ಅಸ್ಸೋಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಹೇಳಿದರು.

ಸಮರ್ಪಕ ಪರಿಹಾರ ನೀಡುವುದರ ಜೊತೆಗೆ, ಎರಡು ಕುಟುಂಬಗಳಲ್ಲಿ ತಲಾ ಒಬ್ಬ ಸದಸ್ಯರಿಗೆ ಉದ್ಯೋಗ ನೀಡುವಂತೆ ಮುಖ್ಯಮಂತ್ರಿ ಪೆಟ್ರೋಲಿಯಂ ಸಚಿವ ಧರ್ಮೇಂದರ್ ಪ್ರಧಾನ್ ಅವರಿಗೆ ತಿಳಿಸಿದ್ದಾರೆ.

ಘಟನೆಯ ಬಗ್ಗೆ 15 ದಿನಗಳಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮನಿಂದರ್ ಸಿಂಗ್ ಅವರಿಗೆ ಆದೇಶಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.