ಲಖನೌ (ಉತ್ತರ ಪ್ರದೇಶ): ಅಮೃತಸರದಿಂದ ಜಯನಗರಕ್ಕೆ ಚಲಿಸುತ್ತಿದ್ದ ರೈಲಿನ ಎರಡು ಬೋಗಿಗಳು ಲಖನೌ ರೈಲ್ವೆ ವಿಭಾಗದ ಚಾರ್ಬಾಗ್ ನಿಲ್ದಾಣದ ಬಳಿ ಹಳಿ ತಪ್ಪಿವೆ.
ಎರಡು ಬೋಗಿಗಳಲ್ಲಿ 155 ಪ್ರಯಾಣಿಕರಿದ್ದು, ಯಾವುದೇ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ. ಹಳಿ ತಪ್ಪಿದ ಬೋಗಿಗಳು ನಿಧಾನವಾಗಿ ಪಕ್ಕಕ್ಕೆ ಜಾರಿವೆ ಎಂದು ಲಖನೌ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್ಎಂ) ಸಂಜಯ್ ತ್ರಿಪಾಠಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮೊರೆನಾ ನಕಲಿ ಮದ್ಯ ದುರಂತದ ಪ್ರಮುಖ ಆರೋಪಿ ಅಂದರ್.. ಸಾವಿನ ಸಂಖ್ಯೆ 25 ಕ್ಕೆ ಏರಿಕೆ
ಹಳಿ ತಪ್ಪಲು ಕಾರಣವೇನೆಂಬುದನ್ನು ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಲಾಗುತ್ತಿದೆ ಎಂದು ತ್ರಿಪಾಠಿ ಹೇಳಿದ್ದಾರೆ.