ETV Bharat / bharat

ಭಾರಿ ಮಳೆಗೆ ಕುಸಿದ ಮನೆ: ಅಪ್ಪನೊಂದಿಗೆ ಇಬ್ಬರು ಮಕ್ಕಳು ಬಲಿ - ತಂದೆ-ಇಬ್ಬರು ಮಕ್ಕಳ ದಾರುಣ ಸಾವು

ಚೈಸರ್ ಗ್ರಾಮದಲ್ಲಿ ಮುಂಜಾನೆ 3 ಗಂಟೆಯ ಸುಮಾರಿಗೆ ಮನೆ ಕುಸಿದಿದ್ದು, ಮಾಲೀಕ ಕುಶಾಲ್ ನಾಥ್ ಹಾಗೂ ಅವರ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಈ ವೇಳೆ ಮನೆಯ ಅವಶೇಷಗಳಡಿ ಸಿಕ್ಕಿ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ ಪತ್ನಿಯನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ.

two-children-among-three-killed-in-house-collapse-in-uttarakhand
ಉತ್ತರಾಖಂಡ: ಭಾರೀ ಮಳೆಗೆ ಕುಸಿದ ಮನೆ, ತಂದೆ-ಇಬ್ಬರು ಮಕ್ಕಳ ದಾರುಣ ಸಾವು
author img

By

Published : Aug 21, 2020, 3:02 PM IST

ಪಿಥೋರ್​ಗಢ (ಉತ್ತರಾಖಂಡ): ಪಿಥೋರ್​ಗಢ ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ ಸುರಿದ ಜೋರು ಮಳೆಯಿಂದಾಗಿ ಮನೆ ಕುಸಿದು ತಂದೆ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

ಚೈಸರ್ ಗ್ರಾಮದಲ್ಲಿ ಮುಂಜಾನೆ ಮೂರು ಗಂಟೆಯ ಸುಮಾರಿಗೆ ಮನೆ ಕುಸಿದಿತ್ತು. ಈ ವೇಳೆ, ಮನೆಯೊಳಗಿದ್ದ ಕುಶಾಲ್ ನಾಥ್ ಹಾಗೂ ಅವರ ಇಬ್ಬರು ಅಸುನೀಗಿದ್ದಾರೆ. ಕುಶಾಲ್ ನಾಥ್ ಪತ್ನಿ ತೀವ್ರ ಗಾಯಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ವಿ.ಕೆ.ಜೋಗ್​ದಂಡೆ ತಿಳಿಸಿದ್ದಾರೆ. ಮನೆ ಹಳೆಯದಾಗಿದ್ದರಿಂದ ಮಳೆಗೆ ಕುಸಿದಿದೆ.

ಎಸ್‌ಡಿಆರ್‌ಎಫ್ ಮತ್ತು ಪೊಲೀಸ್ ತಂಡಗಳು ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.