ಹೈದರಾಬಾದ್ (ತೆಲಂಗಾಣ): 11 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಿನಿಮಾ ತೋರಿಸುವುದಾಗಿ ಆಮಿಷ ಒಡ್ಡಿ ಆಕೆಯನ್ನು ಕರೆದೊಯ್ದ ಇಬ್ಬರು ಖದೀಮರು. ಸಿನಿಮಾ ತೋರಿಸುವುದರ ಬದಲು ನಿರ್ಜನ ಪ್ರದೇಶದ ಕಟ್ಟಡವೊಂದಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ದುಷ್ಕೃತ್ಯವೆಸಗಿ ಕಟ್ಟಡದಿಂದ ಹೊರ ಬರುವ ಹೊತ್ತಿಗೆ ಸಾರ್ವಜನಿಕರು ಈ ಖದೀಮರನ್ನು ಗಮನಿಸಿದ್ದು, ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಾಲಕಿಯ ಹೇಳಿಕೆ ಪಡೆದ ಪೊಲೀಸರು ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು ಆರೋಪಿಯನ್ನು ಭಾನುವಾರ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆಯೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.