ETV Bharat / bharat

ಸಂಸದ ತೇಜಸ್ವಿ ಸೂರ್ಯ ವಿವಾದಾತ್ಮಕ ಟ್ವೀಟ್‌ ಬ್ಲಾಕ್‌ ಮಾಡಿದ ಟ್ವಿಟರ್‌

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಈ ಹಿಂದೆ ಮಾಡಿದ್ದ ಅನೇಕ ಟ್ವೀಟ್​ಗಳನ್ನು ಇದೀಗ ಟ್ವಿಟರ್ ಬ್ಲಾಕ್​ ಮಾಡಿದೆ.

BJP MP Tejasvi Surya
BJP MP Tejasvi Surya
author img

By

Published : May 9, 2020, 4:49 PM IST

ನವದೆಹಲಿ: ಮೇಲಿಂದ ಮೇಲೆ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಟ್ವೀಟ್​ ಮಾಡಿ ಕೆಂಗಣ್ಣಿಗೆ ಗುರಿಯಾಗುತ್ತಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಈ ಹಿಂದೆ ಮಾಡಿದ್ದ ಅನೇಕ ಟ್ವೀಟ್​ಗಳನ್ನು ಬ್ಲಾಕ್​ ಮಾಡಲಾಗಿದೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾಡಿದ್ದ ಟ್ವೀಟ್​ ಕೇಂದ್ರ ಸರ್ಕಾರಕ್ಕೆ ಮುಜುಗರ ತಂದಿತ್ತು. ಹೀಗಾಗಿ ಟ್ವಿಟರ್​​ನಲ್ಲಿರುವ ವಿವಾದಾತ್ಮಕ ಟ್ವೀಟ್‌ಗಳನ್ನು​ ಬ್ಲಾಕ್​ ಮಾಡುವಂತೆ ಕೇಂದ್ರ ಸರ್ಕಾರ ಟ್ವಿಟರ್‌ ಸಂಸ್ಥೆಗೆ ಮನವಿ ಮಾಡಿತ್ತು.

BJP MP Tejasvi Surya
ತೇಜಸ್ವಿ ಸೂರ್ಯ ಟ್ವೀಟರ್​ ಖಾತೆ

'ಭಯೋತ್ಪಾದನೆಗೆ ಧರ್ಮ ಇಲ್ಲ. ಆದರೆ, ಎಲ್ಲ ಭಯೋತ್ಪಾದಕರು ಮುಸ್ಲಿಂ ಧರ್ಮದವರಾಗಿದ್ದು, ಉಗ್ರರಿಗೆ ಧರ್ಮ ಇದೆ' ಎಂದು ಅವರು 2015ರಲ್ಲಿ ಟ್ವೀಟ್‌ ಮಾಡಿದ್ದರು. ಇದಾದ ಬಳಿಕ ಅರಬ್ ರಾಷ್ಟ್ರಗಳಲ್ಲಿ ಶೇ. 95ರಷ್ಟು ಮಹಿಳೆಯರು ಅನೇಕ ವರ್ಷಗಳಿಂದ ಲೈಂಗಿಕವಾಗಿ ಉದ್ರೇಕಗೊಳ್ಳುತ್ತಿಲ್ಲ. ಅದನ್ನು ಅವರು ಮರೆತು ಬಿಟ್ಟಿದ್ದಾರೆ. ಪ್ರತಿಯೊಬ್ಬ ತಾಯಿ ಕೇವಲ ಯಾಂತ್ರಿಕವಾಗಿ ಲೈಂಗಿಕ ಕ್ರಿಯೆಯಿಂದ ಮಕ್ಕಳನ್ನು ಹೆರುತ್ತಿದ್ದು, ಪ್ರೀತಿಯಿಂದಲ್ಲ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಟ್ವೀಟ್ ಡಿಲೀಟ್​ ಮಾಡಿದ್ದರು.

ಒಟ್ಟು 121 ಟ್ವೀಟ್​ಗಳು ತೇಜಸ್ವಿ ಸೂರ್ಯ ಟ್ವಿಟರ್ ಖಾತೆಯಿಂದ ಬ್ಲಾಕ್​ ಮಾಡಲಾಗಿದೆ. ತೇಜಸ್ವಿ ಸೂರ್ಯ ಟ್ವಿಟರ್‌ನಲ್ಲಿ 5 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.