ಮುಂಬೈ: ಮದುವೆಯ ನೆಪದಲ್ಲಿ ಪೈಲಟ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಕಿರುತೆರೆ ನಟಿ ಆರೋಪಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವಾರ ಮುಂಬೈನ ಉಪನಗರ ಒಶಿವಾರಾ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ ಬಳಿಕ ಸೋಮವಾರ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ತಾನು ವೃತ್ತಿಪರ ಪೈಲಟ್‌ನನ್ನು ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಭೇಟಿಯಾಗಿದ್ದೆ. ಆತ ನನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಭೋಪಾಲ್ ಮೂಲದ ಪೈಲಟ್ ಆಗಾಗ್ಗೆ ಫೋನ್‌ನಲ್ಲಿ ಮಾತನಾಡುತ್ತಿದ್ದ ಮತ್ತು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಚಾಟ್ ಮಾಡುತ್ತಿದ್ದ. ಸುಮಾರು 10 ದಿನಗಳ ಹಿಂದೆ ನನ್ನನ್ನು ಕರೆದು ಭೇಟಿಯಾಗಲು ತಿಳಿಸಿದ. ಬಳಿಕ ಆತ ಅವರ ಮನೆ ನೋಡುವ ಬಯಕೆಯನ್ನು ವ್ಯಕ್ತಪಡಿಸಿದ. ಮುಂಬೈನಲ್ಲಿ ನಮ್ಮ ಮನೆಗೆ ಸಹ ಬಂದಿದ್ದ. ಈ ವೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ನಟಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮುಂಬೈನಲ್ಲಿ ಏಕಾಂಗಿಯಾಗಿ ವಾಸಿಸುತ್ತಿರುವ ನಟಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಅಧಿಕಾರಿಗಳು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಂತರ ಆರೋಪಿಗಳು ತಮ್ಮ ವಿವಾಹದ ಬಗ್ಗೆ ಮಾತನಾಡಲು ಹೆತ್ತವರಿಗೆ ಪರಿಚಯಿಸುವುದಾಗಿ ಸಂತ್ರಸ್ತೆಗೆ ಭರವಸೆ ನೀಡಿದ್ದನಂತೆ. ಆದರೆ ಬಳಿಕ ಮೋಸ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಬೇಸರಗೊಂಡ ಕಿರುತೆರೆ ನಟಿ ದೂರು ನೀಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.