ಅಮರಾವತಿ(ಮಹಾರಾಷ್ಟ್ರ): ಜಾಗತಿಕ ವಲಯದ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿರೋ ಪ್ಲಾಸ್ಟಿಕ್ ತ್ಯಾಜ್ಯದ ಮರುಬಳಕೆಯಲ್ಲಿ ವಿವಿಧ ಆವಿಷ್ಕಾರಗಳಾಗುತ್ತಿವೆ. ಕೆಲವು ಸಣ್ಣ ಮಟ್ಟದ್ದಾದರೆ ಇನ್ನೂ ಕೆಲವು ಬೃಹತ್ ಯೋಜನೆಗಳು. ಪ್ಲಾಸ್ಟಿಕ್ ಬಾಟಲ್ಗಳಿಂದ ಸುಂದರ ಕಟ್ಟಡಗಳು ನಿರ್ಮಾಣವಾಗುತ್ತವೆ ಅಂದ್ರೆ ನಂಬೋಕೆ ಕಷ್ಟ. ಆದರೂ ಇದು ನಿಜ.
ಬಳಸಿದ ನಂತರ ಕಸವಾಗೋ ಪ್ಲಾಸ್ಟಿಕ್ ಬಾಟಲ್ಗಳು ಎಲ್ಲೆಡೆ ರಾಶಿ ರಾಶಿಯಷ್ಟಿವೆ. ಇಂತಹ ಘನತ್ಯಾಜ್ಯ ಮರುಬಳಕೆ ಮಾಡಿ ಏನೆಲ್ಲ ಆವಿಷ್ಕಾರ ಮಾಡೋಕೆ ಸಾಧ್ಯವಿದೆ ಇಲ್ನೋಡಿ. ಪ್ಲಾಸ್ಟಿಕ್ ವೇಸ್ಟ್‌ನಿಂದಲೇ ಮನೆ ಕಟ್ಟೋಕೆ ಸಾಧ್ಯ ಅಂತಾ ತೋರಿಸಿದಾರೆ ನಿತಿನ್ ಉಜ್ಗಾಂವ್ಕರ್. ಮಹಾರಾಷ್ಟ್ರದ ಅಮರಾವತಿಯ ರಾಜುರಾ ನಗರದ ನಿತಿನ್, ಪ್ಲಾಸ್ಟಿಕ್ ತ್ಯಾಜ್ಯವನ್ನ ಪರಿಸರ ಸ್ನೇಹಿ ವಸತಿಗೃಹವನ್ನಾಗಿ ಪರಿವರ್ತಿಸುವ ನವೀನ ಆಲೋಚನೆ ಸಾಕಾರಗೊಳಿಸಿದಾರೆ. ಇಟ್ಟಿಗೆಯ ಬದಲು ಬಳಸಿ ಎಸೆದ ಸುಮಾರು 20,000ಕ್ಕೂ ಹೆಚ್ಚು ಪ್ಲಾಸ್ಟಿಕ್ ಬಾಟಲ್‌ಗಳನ್ನೇ ಉಪಯೋಗಿಸಿ ಸುಂದರ ಮನೆಗಳನ್ನು ಕಟ್ಟಿಸಿದ್ದಾರೆ.
ಕಾನೂನು ವಿಷಯದಲ್ಲಿ ಪಧವಿ ಪಡೆದ ಉಜ್ಗಾಂವ್ಕರ್ಗೆ ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ ಅಭಿರುಚಿ ಹೊಂದಿದ್ದರು. ಹಾಗೇ ನಿರ್ಮಾಣ ಕ್ಷೇತ್ರದಲ್ಲಿ ಏನಾದರೂ ವಿಭಿನ್ನ ಆವಿಷ್ಕಾರ ಮಾಡಬೇಕೆಂಬ ಹಂಬಲದಿಂದಿ ಇದ್ದವರು. ಉಪಯುಕ್ತ ಉಪಾಯವನ್ನೇ ಕಾರ್ಯರೂಪದಲ್ಲಿ ತಂದು ಯಶಸ್ವಿಯಾಗಿದಾರೆ.
ನಿತಿನ್ರ ಈ ವಿಚಿತ್ರ ಉಪಾಯ ಕಂಡು ಇವರ ಸ್ನೇಹಿತರು, ಕುಟುಂಬಸ್ಥರೇ ನಕ್ಕಿದ್ದರಂತೆ. ಆದರೆ, ಈಗ ಎಲ್ಲರಿಗೂ ಅಚ್ಚರಿ ಎನಿಸ್ತಿದೆ. ಐಡಿಯಾವೊಂದರ ಮೂಲಕ ಪ್ಲಾಸ್ಟಿಕ್‌ನ ಮರು ಬಳಕೆ ಮಾಡ್ತಿರುವ ನಿತಿನ್ ನಿಜಕ್ಕೂ ಎಲ್ರಿಗೂ ಇಂಪ್ರೆಸ್ ಮಾಡೋದಂತು ನಿಜ..