ETV Bharat / bharat

ಬಿಎಂಡಬ್ಲ್ಯು ಮೇಲೆ ಮೂತ್ರ ವಿಸರ್ಜನೆ: ತಡೆದ ಸೆಕ್ಯುರಿಟಿ ಗಾರ್ಡ್​ಗೆ ಬೆಂಕಿ ಹಚ್ಚಿ ಕೊಲೆ ಯತ್ನ..! ವಿಡಿಯೋ - ಸೆಕ್ಯುರಿಟಿ ಗಾರ್ಡ್​ಗೆ ಬೆಂಕಿ ಹಚ್ಚಿ ಕೊಲೆ ಯತ್ನ

ಸೆಕ್ಯುರಿಟಿ ಗಾರ್ಡ್ ಮೇಲೆ, ಪೆಟ್ರೋಲ್ ಸುರಿದು ಜೀವಂತವಾಗಿ ಸುಡಲು ಯತ್ನಿಸಿರುವ ಘಟನೆ ಪುಣೆಯ ಪಿಂಪ್ರಿ-ಚಿಂಚ್‌ವಾಡ್ ಎಂಬಲ್ಲಿ ನಡೆದಿದೆ.

Trying to set fire to a security guard
ಸಿಸಿಟಿವಿ ದೃಶ್ಯ
author img

By

Published : Nov 19, 2020, 1:22 PM IST

ಮಹಾರಾಷ್ಟ್ರ: ಬಿಎಂಡಬ್ಲ್ಯು ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ತಡೆದ ಸೆಕ್ಯುರಿಟಿ ಗಾರ್ಡ್ ಮೇಲೆ, ಪೆಟ್ರೋಲ್ ಸುರಿದು ಜೀವಂತವಾಗಿ ಸುಡಲು ಯತ್ನಿಸಿರುವ ಘಟನೆ ಪುಣೆಯ ಪಿಂಪ್ರಿ-ಚಿಂಚ್‌ವಾಡ್ ಎಂಬಲ್ಲಿ ನಡೆದಿದೆ. ಕೃತ್ಯದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗಾಯಗೊಂಡ ಸೆಕ್ಯೂರಿಟಿ ಗಾರ್ಡ್​ ಶಂಕರ್ ಭಗವಾನ್ ವೈಫಲ್ಕರ್ ಪೊಲೀಸರಿಗೆ ದೂರು ನೀಡಿದ್ದು, ಮಂಗಳವಾರ ಆರೋಪಿ ರಿಕ್ಷಾ ಚಾಲಕ ಮಹೇಂದ್ರ ಬಾಲು ಕದಮ್ ತನ್ನ ರಿಕ್ಷಾದಿಂದ ಹೊರಬಂದು ಕಂಪನಿಯ ಗೇಟ್‌ಗಳ ಮುಂದೆ ನಿಂತ ಬಿಎಂಡಬ್ಲ್ಯು ಕಾರಿನ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದ. ನಂತರ, ಸೆಕ್ಯುರಿಟಿ ಗಾರ್ಡ್ ಶಂಕರ್​ ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಇದರಿಂದಾಗಿ ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.

ಸಿಸಿಟಿವಿ ದೃಶ್ಯ

ಇದರಿಂದ ಕೋಪಗೊಂಡ ಆರೋಪಿ ಭದ್ರತಾ ಸಿಬ್ಬಂದಿಯ ದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದನು. ಘಟನೆಯಲ್ಲಿ ಭದ್ರತಾ ಸಿಬ್ಬಂದಿಗೆ ಶೇ.20 ರಷ್ಟು ಸುಟ್ಟಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣದಲ್ಲಿ ರಿಕ್ಷಾ ಚಾಲಕ ಕದಮ್ ನನ್ನು ಬಂಧಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.