ETV Bharat / bharat

ಟ್ರಂಪ್​ ಆಗಮನ ಭಾರತದಲ್ಲಿ ಹೊಸ ಅಧ್ಯಾಯ: ಮೋದಿ ಬಣ್ಣನೆ - Trump's visit to India at the turn of the new decade

ಅಮೆರಿಕ ಈಗ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ. ಮತ್ತು ಅಮೆರಿಕಾ ಹೊಂದಿರುವ ಬೃಹತ್​ ಯುದ್ಧ ವ್ಯಾಯಾಮದಲ್ಲಿ ಭಾರತೀಯ ಸೇನೆ ತೊಡಗಿಸಿಕೊಳ್ಳುತ್ತಿದೆ ಎಂದು ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮೋದಿ ಒತ್ತಿ ಹೇಳಿದರು.

Trump's visit "new chapter" in historic Indo-US ties: Modi
ಮೋದಿ ಮತ್ತು ಟ್ರಂಪ್​
author img

By

Published : Feb 24, 2020, 6:10 PM IST

ಅಹಮದಾಬಾದ್‌ : ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಭೇಟಿ ಭಾರತ ಮತ್ತು ಅಮೆರಿಕಾ ಐತಿಹಾಸಿಕ ಸಂಬಂಧಕ್ಕೆ ಇಂದು ಹೊಸ ಭಾಷ್ಯ ಬರೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.

'ನಮಸ್ತೆ ಟ್ರಂಪ್​' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಮೆರಿಕಾ ಮತ್ತು ಭಾರತದ ಸಂಬಂಧಗಳು ಪಾಲುದಾರಿಕೆಯಲ್ಲ, ಅದು ನಿಕಟ ಸಂಬಂಧ. ಈ ಮೂಲಕ ಹೊಸ ಇತಿಹಾಸ ಬರೆಯಲು ಸಜ್ಜಾಗಿದ್ದೇವೆ. ಮುಂದಿನ ಹೊಸ ಸವಾಲುಗಳನ್ನು ಸಮರ್ಥವಾಗಿ ಎದುರಿಸಲಿದ್ದೇವೆ ಎಂದರು.

ಉಭಯ ದೇಶಗಳ ಸ್ನೇಹ ಸೌಹಾರ್ದತೆ ಮತ್ತಷ್ಟು ಗಟ್ಟಿಯಾಗಿರಲು ಬದಲಾವಣೆ ಮತ್ತು ಅಭಿವೃದ್ಧಿ ಮಂತ್ರ ಜಪಿಸಲಿದ್ದೇವೆ ಎಂದು ಪ್ರತಿಪಾದಿಸಿದ ಅವರು, ಭಾರತ ಮತ್ತು ಯುಎಸ್ ಸಂಬಂಧ ಮತ್ತು ಸಹಕಾರ 21ನೇ ಶತಮಾನದಲ್ಲಿ ವಿಶ್ವದ ಹಾದಿ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಅಮೆರಿಕ ಈಗ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ. ಮತ್ತು ಅಮೆರಿಕಾ ಹೊಂದಿರುವ ಬೃಹತ್​ ಯುದ್ಧ ವ್ಯಾಯಾಮದಲ್ಲಿ ಭಾರತೀಯ ಸೇನೆ ತೊಡಗಿಸಿಕೊಳ್ಳುತ್ತಿದೆ ಎಂದು ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮೋದಿ ಒತ್ತಿ ಹೇಳಿದರು.

ಟ್ರಂಪ್​​​ ಆಗಮನ ಭಾರತ ಹೊಸ ಶಕೆಯತ್ತ ಪರಿವರ್ತನೆಯಾಗಲಿದೆ. ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಎರಡೂ ದೇಶಗಳ ಜನರ ಪ್ರಗತಿ ಮತ್ತು ಸಮೃದ್ಧಿಯೂ ಹೊಸ ಅಧ್ಯಾಯವಾಗಲಿದೆ. ವ್ಯಾಪಾರ ಮತ್ತು ವ್ಯವಹಾರ ಮತ್ತಷ್ಟು ಬಲಗೊಳ್ಳಲಿದೆ ಎಂದರು.

ಆರೋಗ್ಯ ಕ್ಷೇತ್ರದಲ್ಲಿ ಟ್ರಂಪ್ ನಡೆಸುತ್ತಿರುವ ಆಡಳಿತವನ್ನು ಮೋದಿ ಶ್ಲಾಘಿಸಿದರು. ರಾಷ್ಟ್ರಗಳ ನಡುವೆ ನಂಬಿಕೆ ಸ್ಥಳದಲ್ಲಿ ಅಚಲವಾದ ಸ್ನೇಹವಿದೆ. ಕಳೆದ ಕೆಲವು ವರ್ಷಗಳಲ್ಲಿ ಯುಎಸ್ ಮತ್ತು ಭಾರತದ ನಡುವಿನ ವಿಶ್ವಾಸ ಮತ್ತಷ್ಟು ಬಲಗೊಂಡಿದೆ ಮತ್ತು ಐತಿಹಾಸಿಕ ಮಟ್ಟ ತಲುಪಿದೆ ಎಂದರು.

ಉದ್ಯಮ, ನಾವೀನ್ಯತೆಯ ಮನೋಭಾವ, ಅವಕಾಶಗಳು ಮತ್ತು ಸವಾಲುಗಳು, ಭರವಸೆ ಮತ್ತು ಆಕಾಂಕ್ಷೆಗಳನ್ನು ಉಭಯ ದೇಶಗಳು ಹಂಚಿಕೊಂಡಿವೆ ಎಂದ ಅವರು, ಏಕಕಾಲದಲ್ಲಿ ಗರಿಷ್ಠ ಸಂಖ್ಯೆಯ ಉಪಗ್ರಹಗಳನ್ನು ಕಳುಹಿಸಿದ ವಿಶ್ವ ದಾಖಲೆ ಭಾರತ ಹೊಂದಿದೆ. ಆರ್ಥಿಕತೆಯಲ್ಲೂ ವೇಗವಾಗಿ ಮುನ್ನುಗ್ಗುತ್ತಿರುವ ದಾಖಲೆಯನ್ನೂ ಭಾರತ ನಿರ್ಮಿಸುತ್ತಿದೆ ಎಂದು ಹೇಳಿದರು.

ಬಲಿಷ್ಠ ಶಕ್ತಿ, ನಿರ್ದಿಷ್ಟ ಗುರಿ, ಸಾಧನೆಗಳಿಂದ 130 ಕೋಟಿ ಭಾರತೀಯರು ಜಂಟಿಯಾಗಿ 'ಹೊಸ ಭಾರತ' ನಿರ್ಮಿಸುತ್ತಿದ್ದಾರೆ. ವ್ಯಾಪಕ ಸಂಶೋಧನೆ ಮತ್ತು ಅಭಿವೃದ್ಧಿ ಪಾಲುದಾರಿಕೆಯನ್ನು ಹೊಂದಿರುವ ದೇಶ ಅಮೆರಿಕ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.