ETV Bharat / bharat

ಟಿವಿ ವಾಹಿನಿಗಳ ಟಿಆರ್​ಪಿ ವಂಚನೆ: ಎರಡು ಚಾನೆಲ್​ಗಳ ಮುಖ್ಯಸ್ಥರ ಬಂಧನ - TRP Latest news

ಸುದ್ದಿವಾಹಿನಿಗಳ ತಿರುಚುವಿಕೆ ದಂಧೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಎರಡು ಚಾನೆಲ್​ಗಳ ಮುಖ್ಯಸ್ಥರ ಬಂಧನ ಮಾಡುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ.

Mumbai police chief Paramvir Singh
Mumbai police chief Paramvir Singh
author img

By

Published : Oct 8, 2020, 8:26 PM IST

Updated : Oct 8, 2020, 9:06 PM IST

ಮುಂಬೈ: ತಮಗೆ ಬೇಕಾದ ರೀತಿಯಲ್ಲಿ ಸುದ್ದಿ ವಾಹಿನಿಗಳ ಟಿಆರ್​​ಪಿ ಬದಲಾಯಿಸುವ ಜಾಲವನ್ನು ಇದೀಗ ಮುಂಬೈ ಪೊಲೀಸರು ಭೇದಿಸಿದ್ದು, ಕೆಲವು ಚಾನೆಲ್​ಗಳು ಜನರಿಗೆ ಹಣ ನೀಡಿ ತಮ್ಮ ಚಾನೆಲ್​​ ವೀಕ್ಷಿಸುವಂತೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಟಿಆರ್​ಪಿ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಎರಡು ಚಾನೆಲ್​ಗಳ ಮುಖ್ಯಸ್ಥರನ್ನು ಬಂಧಿಸಿದ್ದು, ಪ್ರಕರಣವನ್ನು ಆಳವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ಹಗರಣದಲ್ಲಿ ಪ್ರಮುಖ ಚಾನೆಲ್​ ಸೇರಿ ಮೂರು ಚಾನೆಲ್​ಗಳು ಭಾಗಿಯಾಗಿವೆ ಎಂದು ಮುಂಬೈ ಪೊಲೀಸ್​ ಆಯುಕ್ತ ಪರಮ್​ವೀರ್ ಸಿಂಗ್​ ಹೇಳಿದ್ದಾರೆ.

ಟಿಆರ್​ಪಿ ಹಗರಣದಲ್ಲಿ ಭಾಗಿಯಾಗಿರುವ ಚಾನೆಲ್​ಗಳ ಸಿಬ್ಬಂದಿಯ ತನಿಖೆ ನಡೆಸುತ್ತೇವೆ ಎಂದು ಅವರು ತಿಳಿಸಿದ್ದಾರೆ. ತಪ್ಪಿತಸ್ಥರೆಂದು ಕಂಡುಬಂದಲ್ಲಿ ಆಯಾ ಚಾನೆಲ್​ಗಳ ಬ್ಯಾಂಕ್​ ಖಾತೆ ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಸುದ್ದಿ ವಾಹಿನಿಗಳ ಪರವಾಗಿ ಪಕ್ಷದ ಕೆಲವು ಕಾರ್ಯಕರ್ತರು, ಕೆಲವೊಂದು ಕುಟುಂಬಗಳಿಗೆ ಮಾಸಿಕ ಆಧಾರದ ಮೇಲೆ ಹಣ ನೀಡುತ್ತಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯ ಬಂಧನ ಮಾಡಲಾಗಿದ್ದು, ಆತನ ಖಾತೆಯಿಂದ 20 ಲಕ್ಷ ರೂ. ಹಾಗೂ ಲಾಕರ್​​ನಿಂದ 8.5 ಲಕ್ಷ ರೂ ಜಪ್ತಿ ಮಾಡಲಾಗಿದೆ. ಇದರಲ್ಲಿ ಮೂರು ಚಾನೆಲ್​ ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ.

ಪ್ರತಿಷ್ಠಿತ ನ್ಯೂಸ್​ ಚಾನೆಲ್​ ಸೇರಿ ಎರಡು ಮರಾಠಿ ಚಾನೆಲ್​ಗಳು ಇದರಲ್ಲಿ ಭಾಗಿಯಾಗಿದ್ದು, ಈಗಾಗಲೇ ಎರಡು ಚಾನೆಲ್​ ಮಾಲೀಕರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಎಲ್ಲವೂ ಸುಳ್ಳು: ಅರ್ನಾಬ್​

ಟಿಆರ್​ಪಿ ಪ್ರಕರಣದಲ್ಲಿ ರಿಪಬ್ಲಿಕ್​ ಟಿವಿ ತಪ್ಪು ಮಾಡಿದೆ ಎಂಬ ಆರೋಪವನ್ನ ರಿಪಬ್ಲಿಕ್​ ಟಿವಿ ನಿರಾಕರಿಸಿದೆ. ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಮಾತನಾಡಿ ನಿರ್ಭಯವಾಗಿ ಸತ್ಯವನ್ನ ಜನರ ಮುಂದೆ ಇಟ್ಟಿದ್ದಕ್ಕಾಗಿ ನಮ್ಮನ್ನು ಟಾರ್ಗೆಟ್​ ಮಾಡಲಾಗುತ್ತಿದೆ. ಸುಶಾಂತ್​ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಮುಂಬೈ ಪೊಲೀಸರ ವೈಫಲ್ಯ ಪ್ರಶ್ನಿಸಿದ್ದಕ್ಕಾಗಿ ನಮ್ಮ ವಿರುದ್ಧ ಇಂತಹ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಎಂದು ಮುಂಬೈ ಪೊಲೀಸರಿಗೆ ಅವರು ಎಚ್ಚರಿಕೆಯನ್ನೂ ನೀಡಿದ್ದಾರೆ.

Last Updated : Oct 8, 2020, 9:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.