ಅಗರ್ತಲಾ: ತ್ರಿಪುರದ ತೋಟಗಾರಿಕೆ ಮತ್ತು ಮಣ್ಣು ಸಂರಕ್ಷಣಾ ಇಲಾಖೆಯು ರೈತರಿಗೆ ಮಹತ್ವದ ಯೋಜನೆಯೊಂದನ್ನು ಪರಿಚಯಿಸಲು ಮುಂದಾಗಿದೆ. ರಾಜ್ಯಾದ್ಯಂತ ಮಣ್ಣು ರಹಿತ ಕೃಷಿ ಅಥವಾ ಹೈಡ್ರೋಪೋನಿಕ್ಸ್ ಅನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ.
ಮಣ್ಣಿಲ್ಲದೆ ಬೆಳೆಗಳನ್ನು ಬೆಳೆಯುವ ವಿಧಾನವು ಈ ದಿನಗಳಲ್ಲಿ ಹೆಚ್ಚು ಮುನ್ನೆಲೆಗೆ ಬರುತ್ತಿದೆ. ಹೈಡ್ರೋಪೋನಿಕಲ್ ವಿಧಾನದಲ್ಲಿ ಬೆಳೆದ ಸಸ್ಯಗಳು ವೇಗವಾಗಿ ಮತ್ತು ಆರೋಗ್ಯಕರವಾಗಿ ಬೆಳೆಯುತ್ತವೆ. ಏಕೆಂದರೆ ಅವುಗಳಿಗೆ ಅದರ ಪೋಷಕಾಂಶಗಳನ್ನು ನೇರವಾಗಿ ಅದರ ಬೇರುಗಳ ಮೂಲಕ ನೀಡಲಾಗುತ್ತದೆ.
ಹಾರ್ಟಿಕಲ್ಚರ್ ರಿಸರ್ಚ್ ಕಾಂಪ್ಲೆಕ್ಸ್ ನಾಗಿಚೆರಾದಲ್ಲಿ ಹೈಡ್ರೋಪೋನಿಕ್ ಸಂಶೋಧನೆ ನಡೆಯುತ್ತಿದ್ದು, ಮಣ್ಣಿನ ರಹಿತ ಕೃಷಿ ಒಂದು ರೀತಿಯ ತೋಟಗಾರಿಕೆ ಮತ್ತು ಜಲಸಂಸ್ಕೃತಿಯ ಉಪವಿಭಾಗವಾಗಿದೆ.
ಕೃಷಿಯಲ್ಲಿ ಸಮೃದ್ಧವೆಂದು ಪರಿಗಣಿಸಲ್ಪಟ್ಟ ಪಂಜಾಬ್, ಹರಿಯಾಣದಂತಹ ರಾಜ್ಯಗಳು ದೀರ್ಘಕಾಲದಿಂದಲೂ ಈ ಹೈಡ್ರೋಪೋನಿಕ್ ವಿಧಾನವನ್ನು ಅಭ್ಯಾಸ ಮಾಡಿಕೊಂಡು ಬರುತ್ತಿವೆ. ಈಗ ತ್ರಿಪುರ ಕೂಡ ಅದಕ್ಕೆ ಸಜ್ಜಾಗಿದ್ದು, ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಈಗಾಗಲೇ ಎರಡು ಗ್ಯಾಜೆಟ್‌ಗಳನ್ನು ಸ್ಥಾಪಿಸಲಾಗಿದೆ.
ಇದು ತ್ರಿಪುರದಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಅತ್ಯಾಧುನಿಕ ತಂತ್ರಜ್ಞಾನವಾಗಿದೆ. ಹೆಸರೇ ಸೂಚಿಸುವಂತೆ, ಸಸ್ಯದ ಅಭಿವೃದ್ಧಿಯ ಸಂಪೂರ್ಣ ಪ್ರಕ್ರಿಯೆಯು ನೀರಿನಲ್ಲಿ ನಡೆಯುತ್ತದೆ. ಕಾಂಡವನ್ನು ನೆಟ್ಟಗೆ ಮಾಡಲು, ಸಸ್ಯವನ್ನು ಬೆಂಬಲಿಸಲು ಮಣ್ಣಿನ ಚೆಂಡುಗಳನ್ನು ಬಳಸಲಾಗುತ್ತದೆ ಮತ್ತು ಸಸ್ಯಕ್ಕೆ ಅಗತ್ಯವಾದ ಎಲ್ಲಾ ರೀತಿಯ ಪೋಷಕಾಂಶಗಳನ್ನು ನೀರಿನ ಮೂಲಕ ತಲುಪಿಸಲಾಗುತ್ತದೆ ಎಂದು ಹಾರ್ಟಿಕಲ್ಚರ್ ರಿಸರ್ಚ್ ಕಾಂಪ್ಲೆಕ್ಸ್ನ ಡೆಪ್ಯೂಟಿ ಡೈರೆಕ್ಟರ್ ಡಾ. ರಾಜೀಬ್ ಘೋಷ್ ಮಾಹಿತಿ ನೀಡಿದ್ದಾರೆ.
ಡಾ. ಘೋಷ್ ಅವರ ಪ್ರಕಾರ, ಈ ಹೊಸ ತಂತ್ರಜ್ಞಾನವು ರೈತರಿಗೆ ವೇಗವಾಗಿ ಬೆಳೆಯುತ್ತಿರುವ ನಗರೀಕರಣದ ಕಾರಣದಿಂದಾಗಿ ಹೆಚ್ಚುತ್ತಿರುವ ಭೂಸ್ವಾಧೀನದ ಜೊತೆ ಹೋರಾಡಲು ಪ್ರಮುಖವಾಗಿ ಸಹಾಯ ಮಾಡುತ್ತದಂತೆ.