ETV Bharat / bharat

ಹಗರಣದ ಸುಳಿಯಲ್ಲಿ ಚಿದಂಬರಂ: ಮಾಜಿ ಕೇಂದ್ರ ಸಚಿವರಿಗೆ ಇಂದು ಡಿ-ಡೇ! - ಐಎನ್​ಎಕ್ಸ್ ಮೀಡಿಯಾ ಹಗರಣ

ಏರ್ಸೆಲ್ ಮಾಕ್ಸಿಸ್ ಕೇಸ್​ನಲ್ಲಿ ಕೆಳಹಂತದ ನ್ಯಾಯಾಲಯ ಕಾಯ್ದಿರಿಸಿದ್ದ ಮಧ್ಯಂತರ ಜಾಮೀನಿನ ವಿಚಾರಣೆ ಇಂದು ಕೋರ್ಟ್​ ಮುಂದೆ ಬರಲಿದೆ. ಏರ್ಸೆಲ್ ಮ್ಯಾಕ್ಸಿಸ್ ಕೇಸ್​ನಲ್ಲಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು.

ಚಿದಂಬರಂ
author img

By

Published : Sep 5, 2019, 9:52 AM IST

ನವದೆಹಲಿ: ಐಎನ್​ಎಕ್ಸ್ ಮೀಡಿಯಾ ಹಗರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಪಾಲಿಗೆ ಇಂದು ಅತ್ಯಂತ ಮಹತ್ವ ದಿನ.

ಏರ್ಸೆಲ್ ಮಾಕ್ಸಿಸ್ ಕೇಸ್​ನಲ್ಲಿ ಕೆಳಹಂತದ ನ್ಯಾಯಾಲಯ ಕಾಯ್ದಿರಿಸಿದ್ದ ನಿರೀಕ್ಷಣಾ ಜಾಮೀನಿನ ವಿಚಾರಣೆ ಇಂದು ನಡೆಯಲಿದೆ. ಏರ್ಸೆಲ್ ಮ್ಯಾಕ್ಸಿಸ್ ಕೇಸ್​ನಲ್ಲಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು.

ಜಸ್ಟೀಸ್ ಭಾನುಮತಿ ಹಾಗೂ ಎ.ಎಸ್.ಬೋಪಣ್ಣ ನೇತೃತ್ವದ ಪೀಠ ಆಗಸ್ಟ್ 29ರಂದು ತನ್ನ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಜಾರಿ ನಿರ್ದೇಶನಾಲಯದ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್​ಗೆ ಸಲ್ಲಿಕೆ ಮಾಡಿರುವ ದಾಖಲೆಗಳನ್ನು ನೋಡಬೇಕೋ ಇಲ್ಲವೋ ಎನ್ನುವುದನ್ನೂ ಇಂದು ಕೋರ್ಟ್​ ತೀರ್ಮಾನಿಸಲಿದೆ.

ಐಎನ್​ಎಕ್ಸ್ ಮೀಡಿಯಾ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಚಿದು ನ್ಯಾಯಾಂಗ ಬಂಧನ ಇಂದಿಗೆ ಮುಕ್ತಾಯವಾಗುತ್ತಿದೆ. ಆಗಸ್ಟ್ 21ರ ರಾತ್ರಿ ಚಿದಂಬರಂ ಅವರನ್ನು ಸಿಬಿಐ ಬಂಧಿಸಿತ್ತು.

Intro:Body:

ಹಗರಣದ ಸುಳಿಯಲ್ಲಿ ಚಿದಂಬರಂ..! ಸುಪ್ರೀಂನಲ್ಲಿ ಇಂದು ಮಹತ್ವದ ವಿಚಾರಣೆ

ನವದೆಹಲಿ: ಐಎನ್​ಎಕ್ಸ್ ಮೀಡಿಯಾ ಹಗರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಪಾಲಿಗೆ ಇಂದು ಅತ್ಯಂತ ಮಹತ್ವ ದಿನ.

ಮಧ್ಯಂತರ ಜಾಮೀನನ್ನು ದೆಹಲಿ ಹೈಕೋರ್ಟ್​ ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಚಿದಂಬರಂ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು. ಇದೇ ಅರ್ಜಿಯ ವಿಚಾರಣೆಯನ್ನು ಇಂದು ಸರ್ವೋಚ್ಛ ನ್ಯಾಯಾಲಯ ಕೈಗೆತ್ತಿಕೊಳ್ಳಲಿದೆ.

ಜಾಮೀನು ರಹಿತ ವಾರಂಟ್​ಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿ ಹಾಗೂ ಸಿಬಿಐ ನ್ಯಾಯಾಂಗ ಬಂಧನಕ್ಕೆ ಸಂಬಂಧಿಸಿದಂತೆ ಸಹ ಸುಪ್ರೀಂ ಕೋರ್ಟ್ ಆದೇಶ ನೀಡುವ ಸಾಧ್ಯತೆ ಇದೆ.

ಚಿದಂಬರಂ ಹದಿನೈದು ದಿನದ ನ್ಯಾಯಾಂಗ ಬಂಧನ ಇಂದಿಗೆ ಮುಕ್ತಾಯವಾಗಲಿದೆ. ಆಗಸ್ಟ್ 21ರ ರಾತ್ರಿ ಚಿದಂಬರಂ ಅವರನ್ನು ಸಿಬಿಐ ಬಂಧಿಸಿತ್ತು. ಜಾರಿ ನಿರ್ದೇಶನಾಲಯ ಚಿದಂಬರಂ ಬಂಧಿಸುವ ವಿಚಾರದಲ್ಲಿ ಆಗಸ್ಟ್ 29ರಂದು ಸುಪ್ರೀಂ ವಿನಾಯಿತಿ ನೀಡಿತ್ತು. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.