ETV Bharat / bharat

ತೃತೀಯ ಲಿಂಗಿಗಳಿಗೂ ಆಸ್ತಿಯ ಹಕ್ಕು ನೀಡಿದ ಉತ್ತರಪ್ರದೇಶ ಸರ್ಕಾರ - ಕಂದಾಯ ಸಂಹಿತೆ

2006ರ ಉತ್ತರ ಪ್ರದೇಶ ಕಂದಾಯ ಸಂಹಿತೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಉತ್ತರಪ್ರದೇಶ ಸರ್ಕಾರ ತೃತೀಯ ಲಿಂಗಿಗಳಿಗೆ ಆಸ್ತಿಯ ಹಕ್ಕನ್ನು ನೀಡಿದೆ.

ಟ್ರಾನ್ಸ್‌ಜೆಂಡರ್‌ಗಳಿಗೂ ಆಸ್ತಿಯ ಹಕ್ಕು
ಟ್ರಾನ್ಸ್‌ಜೆಂಡರ್‌ಗಳಿಗೂ ಆಸ್ತಿಯ ಹಕ್ಕು
author img

By

Published : Aug 20, 2020, 6:41 PM IST

ಲಕ್ನೋ (ಉತ್ತರಪ್ರದೇಶ): ತೃತೀಯ ಲಿಂಗಿಗಳಿಗೂ ಆನುವಂಶಿಕವಾಗಿ ಬರುವ ಕೃಷಿ ಭೂಮಿಯನ್ನು ಹೊಂದಲು ಹಕ್ಕಿದೆ ಎಂದು ಉತ್ತರಪ್ರದೇಶ ಸರ್ಕಾರ ಹೇಳಿದೆ.

2006ರ ಉತ್ತರ ಪ್ರದೇಶ ಕಂದಾಯ ಸಂಹಿತೆಗೆ ತಿದ್ದುಪಡಿಯನ್ನು ತಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಯಿತು. ಇದರ ಅಡಿಯಲ್ಲಿ ತೃತೀಯ ಲಿಂಗಿಗಳು ಸಹ ಭೂ ಮಾಲೀಕರಾಗಬಹುದು ಮತ್ತು ಕುಟುಂಬದ ಸದಸ್ಯರೆಂದು ಗುರುತಿಸಲಾಗುತ್ತದೆ. ಕೃಷಿ ಭೂಮಿಯನ್ನು ಆನುವಂಶಿಕವಾಗಿ ಪಡೆಯಲು ಸಮಾನ ಹಕ್ಕನ್ನು ಹೊಂದಿರುತ್ತಾರೆ.

ಕಾನೂನಿನ ಕರಡು ಪ್ರಸ್ತಾವನೆಯನ್ನು ರಾಜ್ಯ ಕಾನೂನು ಆಯೋಗವು 2019 ರ ಮಾರ್ಚ್‌ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಲ್ಲಿಸಿತು. ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎ.ಎನ್. ಮಿತ್ತಲ್ ಅವರು ಎಲ್ಲಾ ಆನುವಂಶಿಕ ಕಾನೂನುಗಳಲ್ಲಿ 'ಪುತ್ರರು', 'ಹೆಣ್ಣುಮಕ್ಕಳು', 'ವಿವಾಹಿತರು', 'ಅವಿವಾಹಿತರು' ಮತ್ತು 'ವಿಧವೆ' ಎಂದು ಉಲ್ಲೇಖಿಸಿದ್ದಾರೆ. ಇದು ತೃತೀಯ ಲಿಂಗಿಗಳನ್ನು ಕಾನೂನಿನ ವ್ಯಾಪ್ತಿಯಿಂದ ಹೊರಗಿಡುತ್ತದೆ.

ಅಧಿಕೃತ ವಕ್ತಾರರ ಪ್ರಕಾರ, ಉತ್ತರ ಪ್ರದೇಶ ಕಂದಾಯ ಸಂಹಿತೆ (ತಿದ್ದುಪಡಿ) ಕಾಯ್ದೆ 2020 ರಲ್ಲಿ, ತೃತೀಯ ಲಿಂಗಿಗಳು ಸಹ ಭೂ ಮಾಲೀಕರ ಸದಸ್ಯರನ್ನಾಗಿ ಸೇರಿಸಲು ಸೆಕ್ಷನ್ 4 (10), 108 (2), 109 ಮತ್ತು 110 ಕ್ಕೆ ಬದಲಾವಣೆ ಮಾಡಲಾಗಿದೆ. ಆಸ್ತಿಯ ಮೇಲೆ ಅವರಿಗೆ ಅನುಕ್ರಮ ಮತ್ತು ದೈಹಿಕ ಹಕ್ಕುಗಳನ್ನು ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.