ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ದಟ್ಟವಾದ ಮಂಜು ಆವರಿಸಿದ್ದು, ತಾಪಮಾನವು ಕನಿಷ್ಠ ಏಳು ಡಿಗ್ರಿ ಸೆಲ್ಸಿಯಸ್ನಷ್ಟು ದಾಖಲಾಗಿದೆ.
-
#WATCH Delhi: A dense layer of fog covers the national capital this morning. Visuals from Sarita Vihar. pic.twitter.com/njvMgHhRXF
— ANI (@ANI) January 22, 2020 " class="align-text-top noRightClick twitterSection" data="
">#WATCH Delhi: A dense layer of fog covers the national capital this morning. Visuals from Sarita Vihar. pic.twitter.com/njvMgHhRXF
— ANI (@ANI) January 22, 2020#WATCH Delhi: A dense layer of fog covers the national capital this morning. Visuals from Sarita Vihar. pic.twitter.com/njvMgHhRXF
— ANI (@ANI) January 22, 2020
ದೆಹಲಿಯ ಬಾರಪುಲ್ಲಾ ಫ್ಲೈಓವರ್ ಸೆರಿದಂತೆ ಕೆಲವು ಭಾಗಗಳಲ್ಲಿ ದಟ್ಟವಾದ ಮಂಜು ಕಾಣಿಸಿಕೊಂಡಿತು. ಉತ್ತರ ರೈಲ್ವೆ ವಲಯದ ಕೆಲವು ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಮಂಜು ಆವರಿಸಿದ್ದು, 22 ರೈಲುಗಳಳು ತಡವಾಗಿ ಸಂಚಾರ ಆರಂಭಿಸಿವೆ. ಬೆಳಗ್ಗೆ 10-11 ಗಂಟೆವರೆಗೂ ಇದೇ ರೀತಿಯ ದಟ್ಟವಾದ ಮಂಜು ಮುಸುಕಿದ ವಾತಾವರಣ ಮುಂದುವರೆಯಲಿದ್ದು, ನಂತರ ತಾಪಮಾನ ಏರಿಕೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಟ್ವಿಟ್ಟರ್ನಲ್ಲಿ ತಿಳಿಸಿದೆ.
-
Due to fog and poor visibility in Delhi, 5 flights to Delhi airport diverted today; Visuals from near Indira Gandhi International airport pic.twitter.com/URzGNrwmE0
— ANI (@ANI) January 22, 2020 " class="align-text-top noRightClick twitterSection" data="
">Due to fog and poor visibility in Delhi, 5 flights to Delhi airport diverted today; Visuals from near Indira Gandhi International airport pic.twitter.com/URzGNrwmE0
— ANI (@ANI) January 22, 2020Due to fog and poor visibility in Delhi, 5 flights to Delhi airport diverted today; Visuals from near Indira Gandhi International airport pic.twitter.com/URzGNrwmE0
— ANI (@ANI) January 22, 2020
ಮಂಜಿನ ಕಾಣದಿಂದಾಗಿ ವಾಹನ ಮತ್ತು ವಿಮಾನ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಕೇವಲ ನವದೆಹಲಿ ಮಾತ್ರವಲ್ಲದೆ ಪಂಜಾಬ್, ಹರಿಯಾಣ, ರಾಜಸ್ಥಾನದ ಉತ್ತರ ಭಾಗ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಪ್ರಮಾಣದ ಮಂಜು ಕವಿದಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ 24 ಗಂಟೆಗಳಲ್ಲಿ ಬಿಹಾರ, ಒಡಿಶಾ, ಅಸ್ಸೋಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ ಮತ್ತು ಉತ್ತರ ಪ್ರದೇಶದ ಪ್ರತ್ಯೇಕ ಭಾಗಗಳಲ್ಲಿ ಶೀತದ ವಾತಾವರಣ ಮುಂದುವರೆಯಲಿದ್ದು, ದಟ್ಟವಾದ ಮಂಜು ಕವಿದ ವಾತಾವರಣ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.