ETV Bharat / bharat

ಲಾಕ್‌ಡೌನ್‌ ನಿಯಮ ಸಡಿಲಿಕೆ ಪರಿಣಾಮ: ದೆಹಲಿಯಲ್ಲಿ ಮಿತಿಮೀರಿದ ಸಂಚಾರ ದಟ್ಟಣೆ

ಮೂರನೇ ಹಂತದ ಲಾಕ್‌ಡೌನ್‌ನಲ್ಲಿ ಕೆಲವು ನಿಯಮಗಳನ್ನು ಸಡಿಲಗೊಳಿಸಿದ್ದರ ಪರಿಣಾಮವಾಗಿ ದೆಹಲಿಯಲ್ಲಿ ಸುಮಾರು 2 ಗಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.

author img

By

Published : May 4, 2020, 8:32 PM IST

ನವದೆಹಲಿ: ದೆಹಲಿ ಸರ್ಕಾರವು ನಗರದ ಮೂರನೇ ಹಂತದ ಲಾಕ್‌ಡೌನ್‌ನಲ್ಲಿ ಕೆಲವು ನಿಯಮಗಳನ್ನು ಸಡಿಲಗೊಳಿಸಿದ್ದರಿಂದ ಕೆಲವೆಡೆ ಸಂಚಾರ ದಟ್ಟಣೆ ಉಂಟಾಗಿತ್ತು.

ದೆಹಲಿಯಲ್ಲಿ ಸಂಚಾರ ದಟ್ಟಣೆ
ದೆಹಲಿಯಲ್ಲಿ ಸಂಚಾರ ದಟ್ಟಣೆ

ದೆಹಲಿಯಲ್ಲಿ ಮಾತ್ರವಲ್ಲದೆ ಗಡಿ ಪ್ರದೇಶಗಳಲ್ಲಿಯೂ ಲಾಕ್‌ಡೌನ್ ಉಲ್ಲಂಘಿಸುವವರನ್ನು ನಿಯಂತ್ರಿಸಲು ಸ್ಥಾಪಿಸಲಾದ ಪೊಲೀಸ್ ಚೆಕ್‌ಪೋಸ್ಟ್‌ಗಳಲ್ಲಿ ಟ್ರಾಫಿಕ್​ ಜಾಮ್​ನಿಂದ ವಾಹನಗಳ ಉದ್ದದ ಸಾಲುಗಳಲ್ಲಿ ನಿಂತಿದ್ದವು.

ದೆಹಲಿ-ನೋಯ್ಡಾ ಗಡಿಯ ಕಡೆಗೆ, ದೆಹಲಿ-ಮೆಹ್ರೌಲಿ ರಸ್ತೆಯಲ್ಲಿರುವ ಅಕ್ಷರಧಾಮ್ ರಸ್ತೆಯಲ್ಲಿ, ದೆಹಲಿ-ಗುರುಗ್ರಾಮ್ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ -8 ರ ಚೆಕ್‌ಪಾಯಿಂಟ್ ಮತ್ತು ದೆಹಲಿ-ಗಾಜಿಯಾಬಾದ್ ಗಡಿಯಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಉಂಟಾಗಿತ್ತು.

ದೆಹಲಿ-ದಾಲ್ಲುಪುರ ರಸ್ತೆ ಮತ್ತು ದೆಹಲಿ-ನೋಯ್ಡಾ ಗಡಿಯಲ್ಲಿ ಪ್ರಯಾಣಿಕರು ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿರುವುದು ಕಂಡುಬಂತು. ಗಡಿ ಚೆಕ್‌ಪೋಸ್ಟ್‌ಗಳ ಎರಡೂ ಬದಿಗಳಲ್ಲಿ ದೆಹಲಿ, ಉತ್ತರ ಪ್ರದೇಶ ಮತ್ತು ಹರಿಯಾಣದ ಪೊಲೀಸರನ್ನು ಆಯಾ ವ್ಯಾಪ್ತಿಯಲ್ಲಿ ನಿಯೋಜಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.