ಉತ್ತರ ಪ್ರದೇಶ/ಹಾಪುರ: ಟ್ರ್ಯಾಕ್ಟರ್ ಚಾಲಕ ಹೆಲ್ಮೆಟ್ ಧರಿಸಿಲ್ಲ, ಲೈಸೆನ್ಸ್ ಹೊಂದಿಲ್ಲ ಎಂಬ ಕಾರಣಕ್ಕೆ ಪೊಲೀಸರು 3,000ರೂ ದಂಡ ವಿಧಿಸಿದ ವಿಚಿತ್ರ ಘಟನೆ ಉತ್ತರ ಪ್ರದೇಶದ ಘರ್ ಮುಕ್ತೇಶ್ವರ್ ಗ್ರಾಮದಲ್ಲಿ ನಡೆದಿದೆ.
ದಂಡದ ಚಲನ್ ನೋಡಿ ಗಾಬರಿಗೊಂಡ ಟ್ರ್ಯಾಕ್ಟರ್ ಚಾಲಕ ದೇವೇಂದ್ರ ಕುಮಾರ್, ಸಮೀಪದ ಆರ್ಟಿಓ ಕಛೇರಿಯಲ್ಲಿ ಈ ಬಗ್ಗೆ ವಿಚಾರಿಸಿದಾಗ ಇದು ದ್ವಿಚಕ್ರ ವಾಹನಕ್ಕೆ ದಂಡ ವಿಧಿಸಲಾದ ಚಲನ್ ಎಂಬ ಮಾಹಿತಿ ನೀಡಿದ್ದಾರೆ.
ಈ ಕುರಿತು ಪೊಲೀಸ್ ಅಧಿಕಾರಿ ಅಜಯ್ ವೀರ್ ಸಿಂಗ್ ಪ್ರತಿಕ್ರಿಯಿಸಿದ್ದು, ಅಚಾತುರ್ಯದಿಂದಾಗಿ ಈ ಘಟನೆ ನಡೆದಿದೆ. ಚಾಲಕನಿಗೆ ಕಳುಹಿಸಲಾದ ದಂಡದ ಚಲನ್ ಹಿಂತಿರುಗಿಸಲು ಹೇಳಿದ್ದು, ದಂಡದ ಮೊತ್ತವನ್ನ ನಮ್ಮ ಇಲಾಖೆಯಿಂದ ವಾಪಾಸ್ ನೀಡಲಾಗುವುದು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.