ETV Bharat / bharat

ತೆಲಂಗಾಣದಲ್ಲಿ ಕೊರೊನಾ ಪ್ರಕರಣ 3ಕ್ಕೆ ಏರಿಕೆ: ಹೈದರಾಬಾದ್​ ವಿವಿಯ ಪರೀಕ್ಷೆಗಳು ಮುಂದೂಡಿಕೆ - ಹೈದರಾಬಾದ್​ ವಿಶ್ವವಿದ್ಯಾಲಯ

ತೆಲಂಗಾಣದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದ್ದು, ಹೈದರಾಬಾದ್​ ವಿಶ್ವವಿದ್ಯಾಲಯ ತರಗತಿಗಳು, ಪರೀಕ್ಷೆಗಳನ್ನು ಮಾರ್ಚ್​ 31ರ ವರೆಗೆ ಮುಂದೂಡಿಕೆ ಮಾಡಿದೆ.

The University of Hyderabad
ಹೈದರಾಬಾದ್​ ವಿಶ್ವವಿದ್ಯಾಲಯ
author img

By

Published : Mar 15, 2020, 9:30 PM IST

ತೆಲಂಗಾಣ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿರುವುದಾಗಿ ತೆಲಂಗಾಣ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೂರನೇ ವ್ಯಕ್ತಿಯು ನೆದರ್​ಲ್ಯಾಂಡ್​ಗೆ ಭೇಟಿ ನೀಡಿ ಹಿಂದಿರುಗಿದ್ದು, ಈತನನ್ನು ಹೈದರಾಬಾದ್​ನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಚಿಕಿತ್ಸಾ ಕೊಠಡಿಯಲ್ಲಿರಿಸಲಾಗಿದೆ. ಸೋಂಕಿಗೊಳಗಾಗಿದ್ದ ಮೊದಲ ವ್ಯಕ್ತಿ ಸಂಪೂರ್ಣ ಗುಣಮುಖನಾಗಿ ಆಸ್ಪತ್ರೆಯಿಂದ ಹೊರ ಬಂದಿದ್ದಾರೆ.

ಇನ್ನು ರಾಜ್ಯದಲ್ಲಿ ಪ್ರಕರಣ ಹೆಚ್ಚಾದ ಬೆನ್ನಲ್ಲೇ ಹೈದರಾಬಾದ್​ ವಿಶ್ವವಿದ್ಯಾಲಯ ತರಗತಿಗಳು, ಪರೀಕ್ಷೆಗಳನ್ನು ಮಾರ್ಚ್​ 31ರ ವರೆಗೆ ಮುಂದೂಡಿಕೆ ಮಾಡಿದೆ. ಅಲ್ಲದೇ ಈಗಾಗಲೇ ನಿಗದಿಯಾಗಿದ್ದ ಸಮಾರಂಭಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಕಾರ್ಯಗಾರಗಳು ಸೇರಿದಂತೆ ಎಲ್ಲಾ ಶೈಕ್ಷಣಿಕ ಕಾರ್ಯಕ್ರಮಗಳನ್ನು ರದ್ದು ಮಾಡಿದೆ. ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ಮನೆಗಳಿಗೆ ತೆರಳಿ, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.