ನವದೆಹಲಿ : ಭಾರತದಲ್ಲಿನ 10.1 ಮಿಲಿಯನ್ ಜನರನ್ನು ಮಹಾಮಾರಿ ವೈರಸ್ ತನ್ನ ಸುಳಿಯಲ್ಲಿ ಸಿಲುಕಿಸಿದೆ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ದೆಹಲಿ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ ಹಾಗೂ ರಾಜಸ್ಥಾನ, ಇವೆಲ್ಲ ದೇಶದ ಕೋವಿಡ್ ಪೀಡಿತ ಟಾಪ್ 10 ರಾಜ್ಯಗಳಾಗಿವೆ.
ಕಳೆದ 24 ಗಂಟೆಗಳಲ್ಲಿ 23,068 ಸೋಂಕಿತರು ಪತ್ತೆಯಾಗಿದ್ದು, 336 ಮಂದಿ ವೈರಸ್‌ಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1,01,46,846 ಹಾಗೂ ಮೃತರ ಸಂಖ್ಯೆ 1,47,092ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: ಜಾಗತಿಕ ಮಟ್ಟದಲ್ಲಿ ಕೋವ್ಯಾಕ್ಸಿನ್ ಗಮನಾರ್ಹ ಸಾಧನೆ : ಐಸಿಎಂಆರ್ ಟ್ವೀಟ್
ಒಟ್ಟು ಸೋಂಕಿತರ ಪೈಕಿ 97,17,834 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 2,81,919 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಡಿಸೆಂಬರ್ 24ರವರೆಗೆ 16,63,05,762 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ನಿನ್ನೆ ಒಂದೇ ದಿನ 9,97,396 ಸ್ಯಾಂಪಲ್ಗಳನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.