ರೋಮ್(ಇಟಲಿ): ಇಟಲಿಯಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 17ಕ್ಕೆ ಏರಿದೆ. ಸೋಂಕಿತರ ಸಂಖ್ಯೆ 650ಕ್ಕೆ ತಲುಪಿದೆ ಎಂದು ಇಟಲಿ ರಾಷ್ಟ್ರೀಯ ನಾಗರಿಕ ಸಂರಕ್ಷಣಾ ಸೇವೆಯ ಮುಖ್ಯಸ್ಥ ಏಂಜೆಲೊ ಬೊರೆಲ್ಲಿ ತಿಳಿಸಿದ್ದಾರೆ.
ಫ್ರಾನ್ಸ್‌ನಲ್ಲಿ 38 ಪ್ರಕರಣ:
ಫ್ರಾನ್ಸ್‌ನಲ್ಲಿ ಒಟ್ಟಾರೆ ದೃಢಪಟ್ಟಿರುವ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 38ಕ್ಕೆ ಏರಿದೆ ಎಂದು ಈ ದೇಶದ ಸಾಮಾಜಿಕ ವ್ಯವಹಾರ ಮತ್ತು ಆರೋಗ್ಯ ಸಚಿವ ಆಲಿವಿಯರ್ ವೆರನ್ ಗುರುವಾರ ತಿಳಿಸಿದ್ದಾರೆ.
ಪಾಕಿಸ್ತಾನ-ಇರಾನ್ ನಡುವಿನ ವಿಮಾನಯಾನ ಸ್ಥಗಿತ:
ಮಧ್ಯಪ್ರಾಚ್ಯ ದೇಶವಾದ ಇರಾನ್‌ನಲ್ಲಿ ಈ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನೆಲೆ, ಪಾಕಿಸ್ತಾನ ಇರಾನ್ನಿಂದ ಬರುವ ಎಲ್ಲಾ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿದೆ. ಫೆಬ್ರವರಿ 27ರಿಂದ 28ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪಾಕಿಸ್ತಾನ ಮತ್ತು ಇರಾನ್ ನಡುವಿನ ಎಲ್ಲಾ ನೇರ ವಿಮಾನಗಳ ಹಾರಾಟವನ್ನು ಮುಂದಿನ ಸೂಚನೆ ನೀಡುವವರೆಗೆ ಸ್ಥಗಿತಗೊಳಿಸಲು ವಿಮಾನಯಾನ ಸಂಸ್ಥೆ ನಿರ್ಧರಿಸಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದಲ್ಲಿ ಎರಡು ಕೊರೊನಾ ವೈರಸ್ ಪ್ರಕರಣ ಪತ್ತೆಯಾದ ಬಳಿಕ ಈ ಬೆಳವಣಿಗೆ ಕಂಡುಬಂದಿದೆ. ಇನ್ನು ಇರಾನ್ಲ್ಲಿಕೊರೊನಾ ಸೋಂಕಿನಿಂದ 26ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.