ETV Bharat / bharat

ಇಂದಿನ ಯುವಕರು ಜಾತಿವಾದ, ಪಕ್ಷಪಾತ ಅನುಸರಿಸಬೇಡಿ: ಮನ್​ ಕಿ ಬಾತ್​ನಲ್ಲಿ ಮೋದಿ - ಯುವಕರ ಕುರಿತು ಮೋದಿ ಮಾತು

ಈ ವರ್ಷದ ಕಡೇಯ ಮನ್​ ಕಿ ಬಾತ್​ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮುಂಬರುವ ದಶಕದಲ್ಲಿ ಯುವಕರು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದಿದ್ದಾರೆ.

PM On Mann Ki Baat latest news,ಯುವಕರ ಕುರಿತು ಮೋದಿ ಮಾತು
ಮನ್​ ಕಿ ಬಾತ್​ನಲ್ಲಿ ಮೋದಿ ಮಾತು
author img

By

Published : Dec 29, 2019, 1:00 PM IST

ನವದೆಹಲಿ: 2019ರ ಕಡೆಯ ಮನ್​ ಕಿ ಬಾತ್​ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೊದಿ, ಇಂದಿನ ಯುವಕರು, ಜಾತಿವಾದ, ಸ್ವಜನಪಕ್ಷಪಾತ, ತಾರತಮ್ಯವನ್ನು ಒಪ್ಪಬೇಡಿ ಎಂದು ಮೋದಿ ಕರೆ ನೀಡಿದ್ದಾರೆ.

ದೇಶದ ಜನತೆಗೆ ಹೊಸ ವರ್ಷದ ಶುಭ ಕೋರಿದ ಮೋದಿ, ಕೇವಲ ಮೂರು ದಿನಗಳ ಅವಧಿಯಲ್ಲಿ, 2019ಕ್ಕೆ ವಿದಾಯ ಹೇಳುವುದು ಮಾತ್ರವಲ್ಲ, ನಾವು 21 ನೇ ಶತಮಾನದ ಮೂರನೇ ದಶಕಕ್ಕೆ ಕಾಲಿಡುತ್ತಿದ್ದೇವೆ ಎಂದು ಎಚ್ಚರಿಸಿದರು.

  • PM Modi in #MannKiBaat: In the coming decade, young India will play a key role. Today's youth believes in the system and also has an opinion on a wide range of issues. I consider this to be a great thing. What today's youth dislikes is instability, chaos, nepotism. pic.twitter.com/NPKp9ASvO3

    — ANI (@ANI) December 29, 2019 " class="align-text-top noRightClick twitterSection" data=" ">

ಯುವಕರ ಮೇಲೆ ಭಾರತ ಅನೇಕ ನಿರೀಕ್ಷೆ ಇಟ್ಟುಕೊಂಡಿದೆ. ಏಕೆಂದರೆ ಯುವಕರೇ ಈ ರಾಷ್ಟ್ರವನ್ನು ಎತ್ತರಕ್ಕೆ ಕೊಂಡೊಯ್ಯುವವರು. ಶಕ್ತಿ ಮತ್ತು ಚೈತನ್ಯದಿಂದ ತುಂಬಿರುವ ಯುವಕರಿಗೆ ಬದಲಾವಣೆ ತರುವ ಶಕ್ತಿ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಮುಂಬರುವ ದಶಕದಲ್ಲಿ ಯುವ ಭಾರತ ಪ್ರಮುಖ ಪಾತ್ರವಹಿಸಲಿದೆ. ಇಂದಿನ ಯುವಕರು ವ್ಯವಸ್ಥೆಯನ್ನು ನಂಬುತ್ತಾರೆ ಮತ್ತು ವ್ಯಾಪಕವಾದ ವಿಷಯಗಳ ಬಗ್ಗೆ ಅಭಿಪ್ರಾಯವನ್ನು ಹೊಂದಿದ್ದಾರೆ. ಇದು ಒಂದು ದೊಡ್ಡ ವಿಷಯ ಎಂದು ನಾನು ಪರಿಗಣಿಸುತ್ತೇನೆ. ಬರುವ ದಶಕದಲ್ಲಿ ಯುವಕರ ಅಭಿವೃದ್ಧಿ ಮಾತ್ರವಲ್ಲ ದೇಶದ ಅಭಿವೃದ್ದಿಯಲ್ಲೂ ಯುವಕರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಯುವಜನತೆ ಕುರಿತು ಮೋದಿ ಮಾತನಾಡಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.