ಚೆನ್ನೈ: ಇಂದು ತಮಿಳುನಾಡಿನಲ್ಲಿ 5,975 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, 97 ಜನರು ಮೃತಪಟ್ಟಿವೆ. ಇದುವರೆಗೂ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3,79,385ಕ್ಕೆ ಏರಿಕೆಯಾಗಿದ್ದು, 3,19,327 ಜನರು ಗುಣಮುಖರಾಗಿದ್ದಾರೆ. ಒಟ್ಟು 6517 ಜನರು ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಪ್ರಕಟಿಸಿದೆ.
ರಾಜ್ಯದಲ್ಲಿ 139 ಕೊರೊನಾ ಪರೀಕ್ಷಾ ಕೇಂದ್ರಗಳು ಇವೆ. 63 ಸರ್ಕಾರಿ ಹಾಗೂ 76 ಖಾಸಗಿ ಆಸ್ಪತ್ರೆ ಒಳಗೊಂಡಿವೆ. 53,541 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.