ETV Bharat / bharat

ವರದಕ್ಷಿಣೆಗಾಗಿ ಗರ್ಭಿಣಿ ಸೊಸೆಗೆ ಬೆಂಕಿ ಇಟ್ಟ ಅತ್ತೆ: ಗಂಡು ಮಗುವಿಗೆ ಜನ್ಮ ನೀಡಿ ಮಹಿಳೆ ಸಾವು! - ತಮಿಳುನಾಡಿನಲ್ಲಿ ವರದಕ್ಷಿಣೆ ಕಿರುಕುಳ

ವರದಕ್ಷಿಣೆ ತರಲಿಲ್ಲವೆಂದು ಕಿರುಕುಳ ನೀಡುತ್ತಿದ್ದ ಅತ್ತೆಯೊಬ್ಬಳು ಗರ್ಭಿಣಿ ಸೊಸೆಗೆ ಬೆಂಕಿ ಹಚ್ಚಿದ್ದು, ಗಂಡು ಮಗುವಿಗೆ ಜನ್ಮ ನೀಡಿದ ಸೊಸೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

regnant woman who burnt alive by mother-in-law for dowry
ವರದಕ್ಷಿಣೆಗಾಗಿ ಗರ್ಭಿಣಿ ಸೊಸೆಗೆ ಬೆಂಕಿ ಇಟ್ಟ ಅತ್ತೆ
author img

By

Published : Apr 28, 2020, 11:03 AM IST

Updated : Apr 28, 2020, 11:56 AM IST

ತಂಜಾವೂರು(ತಮಿಳುನಾಡು): ವರದಕ್ಷಿಣೆ ಹಣಕ್ಕಾಗಿ ಅತ್ತೆಯೊಬ್ಬಳು ಗರ್ಭಿಣಿ ಸೊಸೆಗೆ ಬೆಂಕಿ ಹಚ್ಚಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸೊಸೆ ಸಾವಿಗೀಡಾದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಏಪ್ರಿಲ್ 4 ರಂದು ತಂಜಾವೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮದುವೆಯಾದ ಕೆಲವೇ ದಿನಗಳ ನಂತರ, ಅತ್ತೆ ಪುಷ್ಪವಲ್ಲಿ ಮತ್ತು ಅವರ ಕುಟುಂಬದವರು ವರದಕ್ಷಿಣೆಗಾಗಿ ಸಂಗೀತಾಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. ಬಡ ಕುಟುಂಬದಿಂದ ಬಂದ ಸಂಗೀತಾ ಎಲ್ಲಾ ದೌರ್ಜನ್ಯಗಳನ್ನು ಸಹಿಸಿಕೊಂಡು ತನ್ನ ಕುಟುಂಬಕ್ಕೆ ಏನನ್ನೂ ಹಂಚಿಕೊಳ್ಳದೆ ಸುಮ್ಮನಾಗಿದ್ದಾಳೆ.

ಏಪ್ರಿಲ್ 4 ರಂದು ಅತ್ತೆ ಪುಷ್ಪವಲ್ಲಿ ನೀನು ಮತ್ತು ನಿನ್ನ ಮಗು ಬದುಕಿರಬಾರದು ಎಂದು ಆಕೆಯನ್ನು ಜೀವಂತವಾಗಿ ಸುಡಲು ಯತ್ನಿಸಿದ್ದಾಳೆ. ಸಂಗೀತ ಪತಿ ಮತ್ತು ನೆರೆಹೊರೆಯವರು ಆಕೆಯನ್ನು ರಕ್ಷಿಸಿ ತಂಜಾವೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸುಟ್ಟ ಗಾಯಗಳಾಗಿದ್ದ ಸಂಗೀತಾ ಗಂಡು ಮಗುವಿಗೆ ಜನ್ಮ ನೀಡಿ, ಚಿಕಿತ್ಸೆ ವೇಳೆ ಸಾವಿಗೀಡಾಗಿದ್ದಾಳೆ. ನವಜಾತ ಶಿಶುವಿನ ಸ್ಥಿತಿ ಗಂಭೀರವಾಗಿದೆ. ಈಗಾಗಲೆ ಪೊಲೀಸರು ಅತ್ತೆ ಪುಷ್ಪವಲ್ಲಿಯನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

Last Updated : Apr 28, 2020, 11:56 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.