ETV Bharat / bharat

ಶಾಸಕನ ಮೇಲೆಯೇ ಇಟ್ಟಿಗೆ ಎಸೆದ ಪ್ರತಿಭಟನಾಕಾರರು! - ವಿದ್ಯುತ್ ಮರುಸ್ಥಾಪನೆ ಮಾಡದ ಕಾರಣ ಪ್ರತಿಭಟನೆ

ಅಂಫಾನ್ ಚಂಡಮಾರುತ ಅಪ್ಪಳಿಸಿದ ಆರು ದಿನಗಳ ನಂತರವೂ ವಿದ್ಯುತ್ ಸಂಪರ್ಕವನ್ನು ಸರಿಪಡಿಸದ ಕಾರಣ ನಿವಾಸಿಗಳು ರಸ್ತೆ ಬಂದ್ ಮಾಡಿ ಪ್ರತಿಭಟಿಸುತ್ತಿದ್ದರು. ಅವರ ಮನವೊಲಿಸಲು ಶಾಸಕ ಪ್ರಯತ್ನಿಸಿದಾಗ ಪ್ರತಿಭಟನಾಕಾರರು ಇಟ್ಟಿಗೆ ಎಸೆದಿದ್ದಾರೆ.

wb
wb
author img

By

Published : May 27, 2020, 9:28 AM IST

Updated : May 27, 2020, 1:43 PM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಕೋಲ್ಕತ್ತಾದ ನಾಡಿಯಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಂಚಂತಲಾ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಸರಿಪಡಿಸದ್ದನ್ನು ಖಂಡಿಸಿ ಪ್ರತಿಭಟಿಸುತ್ತಿದ್ದ ಜನರ ಮನವೊಲಿಸಲು ಪ್ರಯತ್ನಿಸುತ್ತಿದ್ದಾಗ ಪ್ರತಿಭಟನಾಕಾರರು ಇಟ್ಟಿಗೆ ಎಸೆದಿದ್ದಾರೆ. ಅಲ್ಲಿಗೆ ಮನವೊಲಿಸಲು ಬಂದಿದ್ದ ತೃಣಮೂಲ ಕಾಂಗ್ರೆಸ್​ನ ಶಾಸಕ ಮತ್ತು ಇತರ ನಾಲ್ವರು ಗಾಯಗೊಂಡಿದ್ದಾರೆ.

ಅಂಫಾನ್ ಚಂಡಮಾರುತ ಅಪ್ಪಳಿಸಿದ ಆರು ದಿನಗಳ ನಂತರವೂ ಈ ಪ್ರದೇಶಕ್ಕೆ ಕಡಿತಗೊಂಡಿದ್ದ ವಿದ್ಯುತ್ ಸಂಪರ್ಕವನ್ನು ಸರಿಪಡಿಸದ ಕಾರಣ ಬಂದರು ಪ್ರದೇಶದ ನಾಡಿಯಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಂಚಂತಲಾ ನಿವಾಸಿಗಳು ರಸ್ತೆ ಬಂದ್ ಮಾಡಿ ಪ್ರತಿಭಟಿಸುತ್ತಿದ್ದರು.

ಮೆಟಿಯಾಬ್ರಜ್ ಶಾಸಕ ಅಬ್ದುಲ್ ಖಲೇಕ್ ಮೊಲ್ಲಾ ಮಧ್ಯಪ್ರವೇಶಿಸಿ ಅವರ ಪ್ರತಿಭಟನೆಯನ್ನು ತಡೆದು ಮನವೊಲಿಸಲು ಪ್ರಯತ್ನಿಸಿದಾಗ ಪ್ರತಿಭಟನಾಕಾರರು ಶಾಸಕನ ಮೇಲೆಯೇ ಇಟ್ಟಿಗೆ ಎಸೆದಿದ್ದಾರೆ. ಪರಿಣಾಮ ಶಾಸಕ ಹಾಗೂ ಶಾಸಕರ ಜೊತೆಗಿದ್ದ ನಾಲ್ವರು ಗಾಯಗೊಂಡಿದ್ದಾರೆ.

ಘಟನೆಯ ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳನ್ನು ಪತ್ತೆ ಮಾಡುತ್ತಿದ್ದಾರೆ. ಗಾಯಗೊಂಡವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Last Updated : May 27, 2020, 1:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.