ತಿರುಮಲ: ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ನವರಾತ್ರಿ ಉತ್ಸವದ ಪೂಜಾ ಕಾರ್ಯಗಳು ಅದ್ಧೂರಿಯಾಗಿ ನಡೆಯುತ್ತಿದ್ದು, ರಾತ್ರಿ ನಡೆದ ಗರುಡ ಸೇವೆಯಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು.
ಮಲಯಪ್ಪ ಬೆಟ್ಟದಲ್ಲಿ ಆಭರಣಗಳಿಂದ ಅಲಂಕರಿಸಿದ ಗರುಡ ವಾಹನದ ಅದ್ಧೂರಿ ಮೆರವಣಿಗೆಗೆ ಸುಮಾರು ಮೂರು 3 ಲಕ್ಷಕ್ಕೂ ಅಧಿಕ ಭಕ್ತರು ಸಾಕ್ಷಿಯಾಗಿದ್ದರು.
ಶ್ರೀ ವೆಂಕಟೇಶ್ವರ ಸ್ವಾಮಿಯನ್ನ ಪವಿತ್ರ ಶ್ರೀವಾಲ್ಲಿ ಪುತ್ತೂರ್ ಹಾರದಿಂದ ಅಲಂಕರಿಸಲ್ಪಡಲಾಗಿತ್ತು. ಅಲ್ಲದೇ ಚಿನ್ನದ ಶ್ರೀಲಕ್ಷ್ಮಿ ಸಹಸ್ರ ನಾಮ ಕಸುಲಾ ಹಾರ ಮತ್ತು ಅತ್ಯಂತ ಅಮೂಲ್ಯವಾದ 'ಮಕರ ಕಾಂತಿ'ಯಿಂದ ಅಲಂಕರಿಸಲಾಗಿತ್ತು.
ನವರಾತ್ರಿ ಉತ್ಸವದಲ್ಲಿ ಗರುಡ ಸೇವೆ ಅತ್ಯಂತ ಪವಿತ್ರವಾದ ಉತ್ಸವವಾಗಿದ್ದು, ವಿವಿದ ಕಲಾ ತಂಡಗಳು ಈ ವೈಭವದ ಬ್ರಹ್ಮೋತ್ಸವದಲ್ಲಿ ಪಾಲ್ಗೊಂಡಿದ್ದವು.