ETV Bharat / bharat

ವಿಶೇಷ ಲೇಖನ: ಇದು ನವೋದ್ಯಮಗಳನ್ನು ಪ್ರೋತ್ಸಾಹಿಸುವ ಸಮಯ - ಸ್ಟಾರ್ಟಪ್‌ಗಳನ್ನು ಪ್ರೋತ್ಸಾಹಿಸುವ ಸಮಯ

ಪ್ರಧಾನಿ ನರೇಂದ್ರ ಮೋದಿ ಕನಸಿನ ಆತ್ಮ ನಿರ್ಭರ ಭಾರತ್ ಅನ್ನು ಸಾಧಿಸಬೇಕಾದರೆ ಸರ್ಕಾರದ ಕಡೆಯಿಂದ ಮಾಡಬೇಕಿರುವ ಹಲವು ಸಂಗತಿಗಳಿವೆ. ಇಂದಿನ ಸ್ಟಾರ್ಟಪ್‌ಗಳನ್ನು ನಾಳಿನ ಮಲ್ಟಿನ್ಯಾಷನಲ್‌ ಕಂಪನಿಗಳನ್ನಾಗಿ ರೂಪಿಸುವುದಕ್ಕಾಗಿ ಪ್ರಧಾನ ಮಂತ್ರಿಯ ಕನಸನ್ನು ನನಸು ಮಾಡಲು ತುಂಬಾ ಕೆಲಸ ಮಾಡಬೇಕಿರುವುದು ಬಾಕಿ ಇದೆ.

Time to encourage start-ups
ವಿಶೇಷ ಲೇಖನ: ಸ್ಟಾರ್ಟಪ್‌ಗಳನ್ನು ಪ್ರೋತ್ಸಾಹಿಸುವ ಸಮಯ
author img

By

Published : Jan 7, 2021, 5:21 PM IST

ಅದ್ಭುತ ವಾಣಿಜ್ಯಿಕ ಪರಿಕಲ್ಪನೆಗಳು ಮತ್ತು ನವೀನ ತಂತ್ರಜ್ಞಾನಗಳನ್ನು ಪ್ರೋತ್ಸಾಹಿಸುವ ದೇಶಗಳಲ್ಲಿ ಪ್ರಗತಿ ಅತ್ಯಂತ ವೇಗದಲ್ಲಿ ನಡೆಯುತ್ತಿದೆ. ಇದನ್ನು ಸಾಬೀತುಪಡಿಸುವ ಹಲವು ಪ್ರೋತ್ಸಾಹದಾಯಕ ಉದಾಹರಣೆಗಳೇ ಇವೆ. ಆದರೆ, ನಮ್ಮ ದೇಶದಲ್ಲಿ, ಶೈಕ್ಷಣಿಕ ಮಾನದಂಡಗಳು ಕುಸಿತ ಕಂಡಿರುವುದರಿಂದ ಇಂಜಿನಿಯರಿಂಗ್ ಕಾಲೇಜುಗಳು ನಿರುದ್ಯೋಗಿ ಪದವೀಧರರನ್ನು ಉತ್ಪಾದಿಸುವ ಫ್ಯಾಕ್ಟರಿಗಳಾಗಿವೆ. ಈ ನಿಟ್ಟಿನಲ್ಲಿ, ತೆಲಂಗಾಣದ ಮಾಹಿತಿ ತಂತ್ರಜ್ಞಾನ ಸಚಿವ ಕೆಟಿಎಆರ್‌ ಸಲಹೆ ಮಾಡಿದಂತೆ, ಬಿಟೆಕ್ ವಿದ್ಯಾರ್ಥಿಗಳು ಮಾಡಿದ ಸಂಶೋಧನೆಗಳನ್ನು ಪ್ರೋತ್ಸಾಹಿಸುವುದು ಅತ್ಯಂತ ಅಗತ್ಯದ ಸಂಗತಿಯಾಗಿದೆ. ಕ್ರಿಯಾಶೀಲತೆ ಮತ್ತು ಹೊಸ ಪರಿಕಲ್ಪನೆಗಳನ್ನು ಪ್ರೋತ್ಸಾಹಿಸಿದರೆ, ಅದ್ಭುತ ಉದ್ಯಮಗಳನ್ನು ಅನಾವರಣಗೊಳಿಸಬಹುದು. ಈ ನಿಟ್ಟಿನಲ್ಲಿ ಮುಂದೆ ಹೆಜ್ಜೆ ಇಡಲು ಪ್ರತಿ ರಾಜ್ಯವೂ ಕ್ರಮ ಕೈಗೊಳ್ಳಬೇಕಿದೆ.

ಪ್ರಧಾನಿ ನರೇಂದ್ರ ಮೋದಿ ಕನಸಿನ ಆತ್ಮ ನಿರ್ಭರ ಭಾರತ್ ಅನ್ನು ಸಾಧಿಸಬೇಕಾದರೆ ಸರ್ಕಾರದ ಕಡೆಯಿಂದ ಮಾಡಬೇಕಿರುವ ಹಲವು ಸಂಗತಿಗಳಿವೆ. ಇಂದಿನ ಸ್ಟಾರ್ಟಪ್‌ಗಳನ್ನು ನಾಳಿನ ಮಲ್ಟಿನ್ಯಾಷನಲ್‌ ಕಂಪನಿಗಳನ್ನಾಗಿ ರೂಪಿಸುವುದಕ್ಕಾಗಿ ಪ್ರಧಾನ ಮಂತ್ರಿಯ ಕನಸನ್ನು ನನಸು ಮಾಡಲು ತುಂಬಾ ಕೆಲಸ ಬಾಕಿ ಇದೆ. ಹೈದರಾಬಾದ್‌ನಲ್ಲಿ ನಡೆದ ಉದ್ಯಮಶೀಲತೆ ಮತ್ತು ಔದ್ಯಮಿಕ ಸಮ್ಮೇಳನದಲ್ಲಿ ತಿಳಿದು ಬಂದಂತೆ, ಅದ್ಭುತವನ್ನು ಸಾಧಿಸಲು ವಿಶ್ವಾಸ, ಪ್ರೋತ್ಸಾಹ ಮತ್ತು ಹೂಡಿಕೆ ಅತ್ಯಂತ ಪ್ರಮುಖ ಸಂಗತಿಯಾಗಿದೆ. ಸಾಂಸ್ಥಿಕ ಪ್ರೋತ್ಸಾಹವಿದ್ದಲ್ಲಿ ಯಾವುದೇ ಸವಾಲನ್ನೂ ಸುಲಭವಾಗಿ ಎದುರಿಸಬಹುದು ಮತ್ತು ಹೊಸ ಪರಿಕಲ್ಪನೆಗಳು ಮತ್ತು ಹಣಕಾಸು ನೆರವನ್ನೂ ಉದ್ಯಮಿಗಳಿಗೆ ಒದಗಿಸುವುದು ಅತ್ಯಂತ ಅಗತ್ಯದ್ದಾಗಿದೆ.

ನಮ್ಮ ದೇಶದಲ್ಲಿ ಹಲವು ಸ್ಟಾರ್ಟಪ್‌ಗಳ ಕನಸನ್ನು ಕೋವಿಡ್‌ -19 ನುಚ್ಚು ನೂರು ಮಾಡಿದ್ದರೆ, ಇನ್ನೊಂದೆಡೆ ಇದೇ ಅವಧಿಯಲ್ಲಿ ನಮ್ಮ ನೆರೆ ದೇಶ ಚೀನಾ, ವಿಶ್ವದ ಉತ್ಪಾದನೆ ಉದ್ಯಮಗಳ ಕೇಂದ್ರವಾಗಿ ಬೆಳೆದಿದೆ. ಕಾಲಕಾಲಕ್ಕೆ ಉದ್ಭವಿಸುವ ತಾಂತ್ರಿಕ ಅವಕಾಶಗಳನ್ನೂ ಚೀನಾ ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿದೆ. ಉದ್ಯೋಗವನ್ನು ಬಯಸುವವರಿಗಿಂತ ಹೆಚ್ಚಾಗಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ವ್ಯಕ್ತಿಗಳನ್ನು ರೂಪಿಸಲು ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ ಎಂದು ನಮ್ಮ ಸರ್ಕಾರಗಳು ಹೇಳಿಕೊಳ್ಳುತ್ತಿವೆ. ಹೊಸ ಪರಿಕಲ್ಪನೆಗಳನ್ನು ಪ್ರೋತ್ಸಾಹಿಸುವ ತಂತ್ರಗಳು ಮತ್ತು ಯೋಜನೆಗಳಿಗೆ ನಮ್ಮ ಸರ್ಕಾರಗಳು ಆದ್ಯತೆ ನೀಡಿದರೆ ಮಾತ್ರ ದೇಶದಲ್ಲಿನ ಪರಿಸ್ಥಿತಿ ಸುಧಾರಿಸಬಲ್ಲದು.

ಇಸ್ರೇಲ್, ಯುಕೆ, ರಷ್ಯಾ ಮತ್ತು ಜರ್ಮನಿಯಂತಹ ದೇಶಗಳು ವಿದ್ಯಾರ್ಥಿಗಳಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ವಿಶೇಷ ಆಸಕ್ತಿ ಮೂಡಿಸುವಂತಹ ಪಠ್ಯಕ್ರಮವನ್ನು ಶಾಲೆ ಮಟ್ಟದಲ್ಲಿ ಅನುಸರಿಸುತ್ತಿವೆ. ಇದರಿಂದ, ಎಂಜಿನಿಯರಿಂಗ್‌ ಸಂಶೋಧನೆಗಳನ್ನು ಮಾಡಲು ಅವರಿಗೆ ಸಾಧ್ಯವಾಗುತ್ತಿದೆ. ಆದರೆ ಇಂತಹ ಬದ್ಧತೆಯ ಕೊರತೆ ನಮ್ಮ ದೇಶದಲ್ಲಿ ಕಡಿಮೆ ಕಾಣಿಸುತ್ತಿದೆ. ಅಮೆರಿಕಕ್ಕೆ ಹೋಲಿಸಿದರೆ, ಭಾರತದಲ್ಲಿ ತಮ್ಮ ಸ್ಟಾರ್ಟಪ್‌ಗಳು ಫಂಡಿಂಗ್‌ ಪಡೆಯಲು ನಾಲ್ಕರಿಂದ ಐದು ಪಟ್ಟು ಹೆಚ್ಚು ಶ್ರಮಿಸಬೇಕಿದೆ ಎಂದು ಇದೇ ಕಾರಣಕ್ಕೆ ತರುಣ್‌ ಖನ್ನಾ ಸಮಿತಿ ಹೇಳಿದೆ.

ಜೆಎನ್‌ಟಿಯುಹೆಚ್‌ನಂತಹ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳಿಗೆ ಸ್ವಂತ ಉದ್ಯಮವನ್ನು ಸ್ಥಾಪಿಸಲು ಪ್ರೋತ್ಸಾಹಿಸುತ್ತಿವೆ. ಸ್ಟಾರ್ಟಪ್‌ಗಳನ್ನು ಸ್ಥಾಪಿಸಲು ನೀಡುವ ಇಂತಹ ಪ್ರೋತ್ಸಾಹವು ರಾಷ್ಟ್ರೀಯ ನೀತಿಯ ಭಾಗವಾಗಬೇಕು. ಮೆರಿಟ್ ಅನ್ನು ಗುರುತಿಸಿ, ಪ್ರೋತ್ಸಾಹಿಸುವ ಪಾರದರ್ಶಕ ವ್ಯವಸ್ಥೆಯನ್ನು ನಾವು ರೂಪಿಸಬೇಕಿದೆ. ಇದರಿಂದ, ಹೊಸ ಸ್ಟಾರ್ಟಪ್‌ಗಳು ಮೊಳಕೆಯಲ್ಲೇ ಮುದುಡುವುದಿಲ್ಲ. ಯಶಸ್ಸಿಗೆ ಪದವಿ ಮಾತ್ರ ಸಾಲದು ಎಂದು ವಾಟ್ಸಾಪ್‌ನ ಕಥೆಯೇ ನಮಗೆ ಸ್ಪಷ್ಟವಾಗಿ ತಿಳಿಸುತ್ತದೆ.

ಫೇಸ್‌ಬುಕ್‌ನಲ್ಲಿ ಉದ್ಯೋಗ ಪಡೆಯುವಲ್ಲಿ ವಿಫಲವಾದ್ದರಿಂದ, ಬ್ರಿಯಾನ್‌ ಆಕ್ಟನ್‌ ಮತ್ತು ಜಾನ್‌ ಕೌಮ್‌ 2009 ರಲ್ಲಿ ವಾಟ್ಸಾಪ್ ಅನ್ನು ರೂಪಿಸಿದರು. ಐದು ವರ್ಷಗಳ ನಂತರ ಅದೇ ಸಂಸ್ಥೆಯನ್ನು ಭಾರಿ ಬೆಲೆಗೆ ಅವರು ಮಾರಾಟ ಮಾಡಿದರು. ಅವರಿಗೆ ಉದ್ಯೋಗ ನೀಡಲು ನಿರಾಕರಿಸಿದ್ದ ಫೇಸ್‌ ಬುಕ್‌, 1930 ಕೋಟಿ ಯುಎಸ್‌ಡಿ (ಅಂದಾಜು 1.25 ಲಕ್ಷ ಕೋಟಿ) ಗೆ ಅವರ ಆಪ್‌ ಅನ್ನು ಖರೀದಿ ಮಾಡಿತು. ಪೇಟಿಎಂ, ಫ್ಲಿಪ್‌ಕಾರ್ಟ್‌, ಸ್ವಿಗ್ಗಿ, ಬೈಜೂಸ್‌ ಮತ್ತು ಬಿಗ್‌ಬಾಸ್ಕೆಟ್‌ನ ಕಥೆಗಳು ನಮಗೆ ಸ್ಟಾರ್ಟಪ್‌ನ ಸಾಮರ್ಥ್ಯವನ್ನು ಸಾಬೀತು ಮಾಡುತ್ತವೆ.

5ಜಿ ಕಾಲದಲ್ಲಿ ಆರೋಗ್ಯ, ಶಿಕ್ಷಣ, ಆತಿಥ್ಯ ಮತ್ತು ಕೃಷಿ ವಲಯದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆ ಇರುವ ಈ ಕಾಲದಲ್ಲಿ, ದೇಶದಲ್ಲಿ ಇನ್ನಷ್ಟು ಕ್ರಿಯಾಶೀಲತೆ ಬೆಳೆಯಬೇಕಿದೆ. ಇಂತಹ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು, ಬೋಧನೆ ಸಿಬ್ಬಂದಿಗೆ ತರಬೇತಿ ಮತ್ತು ಗುಣಮಟ್ಟದ ಅನ್ವೇಷಣೆಗಳಿಗೆ ಸೂಕ್ತ ಪ್ರೋತ್ಸಾಹವನ್ನು ನಾವು ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ನೀತಿ ರೂಪಿಸಿದರೆ, ಸಮರ್ಥ ವಿಕಾಸ ಸಾಧ್ಯವಿದ್ದು, ಇದರಿಂದ ಆತ್ಮನಿರ್ಭರ ಭಾರತದ ಕನಸನ್ನೂ ನನಸಾಗಿಸಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.