ETV Bharat / bharat

ಇದು T-73 ಸಾಮ್ರಾಜ್ಯ.... ಕ್ಯಾಮರಾದಲ್ಲಿ ಆ ಸುಂದರ ದೃಶ್ಯಗಳು ಸೆರೆ

author img

By

Published : Jun 25, 2019, 3:11 PM IST

ರಣಥಂಭೋರ್​ ರಾಷ್ಟ್ರೀಯ ಉದ್ಯಾನದಲ್ಲಿ T-73 ಎಂಬ ಹೆಣ್ಣು ಹುಲಿಯೊಂದು ಕೆಲ ದಿನಗಳ ಹಿಂದೆ 3 ಮರಿಗಳಿಗೆ ಜನ್ಮ ನೀಡಿದೆ.

ರಣಥಂಭೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ

ರಣಥಂಭೋರ್​: ಇಲ್ಲಿನ ರಾಷ್ಟ್ರೀಯ ಉದ್ಯಾನದಲ್ಲಿ T-73 ಎಂಬ ಹೆಣ್ಣು ಹುಲಿಯೊಂದು ಕೆಲ ದಿನಗಳ ಹಿಂದೆ 3 ಮರಿಗಳಿಗೆ ಜನ್ಮ ನೀಡಿದೆ. ಇತ್ತೀಚೆಗೆ ತನ್ನ 3 ಮರಿಗಳೊಂದಿಗೆ ಕಾಣಸಿಕೊಂಡಿದ್ದು, ಅವೆಲ್ಲ ಸುಮಾರು ನಾಲ್ಕು ತಿಂಗಳ ಮರಿಗಳೆಂದು ತಿಳಿದುಬಂದಿದೆ. ವನ್ಯಜೀವಿ ಅಧಿಕಾರಿಗಳು ಅಳವಡಿಸಿರುವ ಕಾಮೆರಾದಲ್ಲಿ ಹುಲಿ ಮತ್ತು ಮರಿಗಳಿರುವ ದೃಶ್ಯ ಸೆರೆಯಾಗಿದೆ.

Tiger
ರಣಥಂಭೋರ್​ ರಾಷ್ಟ್ರೀಯ ಉದ್ಯಾನವನ

ಈ T-73 ಹುಲಿ ನಾಚಿಕೆ ಸ್ವಭಾವದ್ದಾಗಿದ್ದು, ಪ್ರವಾಸಿಗರು ಮತ್ತು ವನ್ಯಜೀವಿ ಅಧಿಕಾರಿಗಳ ಪಾಲಿಗೆ ಪ್ರಿಯವಾಗಿದೆ. ಈ ಮರಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. T-73 ಹುಲಿ ಪ್ರಸಿದ್ಧ ಕುಟುಂಬಕ್ಕೆ ಸೇರಿದ್ದು, ಸುಂದರಿ ಎಂದು ಕರೆಯಲ್ಪಡುವ ಪ್ರಸಿದ್ಧ T-17 ಹುಲಿಯ ಮರಿ ಇದಾಗಿದೆ. T-60 (ಜೂನಿಯರ್​ ಇಂದು) ತಿಂಗಳ ಹಿಂದೆ ಮರಿಗೆ ಜನ್ಮ ನೀಡಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ಒಟ್ಟು 71 ಹುಲಿಗಳಿವೆ.

Tigress
T-73 ಸಾಮ್ರಾಜ್ಯ....

T-73 ಹುಲಿ ಎಂದರೆ ಯಾರು ?

ನಾಚಿಕೆ ಸ್ವಭಾವದ 2012ರಲ್ಲಿ ಜನಿಸಿದ, T-73 ಹುಲಿ T-17 ಹುಲಿಯ ಮಗಳು. ಈ T-17 ಹುಲಿ T -16 (ಮಚಲಿ) ಹುಲಿಯ ಮಗಳು. T-73 ಹುಲಿಯು 5 ನೇ ಝೋನ್​ನಲ್ಲಿ ವಾಸವಿದೆ. ಕಚಿಡಾ ವ್ಯಾಲಿ ಎಂದು ಕರೆಯಲ್ಪಡುವ ರಾಷ್ಟ್ರೀಯ ಉದ್ಯಾನವನದ ಪ್ರದೇಶದಲ್ಲಿ T-73 ಹುಲಿ ಹೆಚ್ಚಾಗಿ ಗುರುತಿಸಲ್ಪಟ್ಟಿದೆ.

Intro:Body:

national chethu

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.